ADVERTISEMENT

ರಷ್ಯಾ ಸೇನಾಧಿಕಾರಿಗೆ ಗುಂಡು ಹಾರಿಸಿದ ಯುವಕ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 6:37 IST
Last Updated 27 ಸೆಪ್ಟೆಂಬರ್ 2022, 6:37 IST

ಕೀವ್‌ (ಎಪಿ): ರಷ್ಯಾ ಸೇನೆಗೆ ಯೋಧರ ನೇಮಕಾತಿ ವೇಳೆಯುವಕನೊಬ್ಬ ಸೇನಾಧಿಕಾರಿಗೆ ತುಂಬಾ ಹತ್ತಿರದಿಂದ ಗುಂಡು ಹಾರಿಸಿರುವ ಘಟನೆ ಸೋಮವಾರ ನೇಮಕಾತಿ ಕಚೇರಿ ಬಳಿ ನಡೆದಿದೆ.

ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧಕ್ಕೆ ಲಕ್ಷಾಂತರ ಪುರುಷರನ್ನು ಸಜ್ಜುಗೊಳಿಸುವ ರಷ್ಯಾದ ನಾಯಕತ್ವದ ಪ್ರಯತ್ನಗಳಿಗೆ ಪ್ರತಿರೋಧವಾಗಿ ಯುವಕ ‘ನಾವು ಯಾರೊಬ್ಬರು ಯುದ್ಧ ಮಾಡಲು ಉಕ್ರೇನ್‌ಗೆ ಹೋಗುವುದಿಲ್ಲ. ನಾವೆಲ್ಲರೂ ಮನೆಗೆ ಹೋಗುತ್ತೇವೆ’ ಎಂದು ಕೂಗುತ್ತಾ ಈ ಕೃತ್ಯ ಎಸಗಿದ್ದಾನೆ.

ಸೈಬೀರಿಯಾದ ಉಸ್ತ್‌– ಇಲಿಮ್‌ಸ್ಕ್‌ ನಗರದಲ್ಲಿ ಈ ಘಟನೆ ನಡೆದಿದೆ. ಗುಂಡಿನ ದಾಳಿ ಮಾಡಿದ ಸ್ಥಳೀಯ ಯುವಕ ರಸ್ಲಾನ್‌ ಜಿನಿನ್‌ (25) ಎಂಬಾತನನ್ನು ಬಂಧಿಸಲಾಗಿದೆ. ಗಾಯಗೊಂಡ ಸೇನಾಧಿಕಾರಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.