ADVERTISEMENT

ಪಾಕಿಸ್ತಾನಕ್ಕೆ ಎಡಿಬಿಯಿಂದ 80 ಕೋಟಿ ಡಾಲರ್‌ ನೆರವು

ಪಿಟಿಐ
Published 3 ಜೂನ್ 2025, 14:21 IST
Last Updated 3 ಜೂನ್ 2025, 14:21 IST
ಏಷ್ಯಾ ಅಭಿವೃದ್ಧಿ ಬ್ಯಾಂಕ್‌
ಏಷ್ಯಾ ಅಭಿವೃದ್ಧಿ ಬ್ಯಾಂಕ್‌   

ಇಸ್ಲಾಮಾಬಾದ್‌: ಪಾಕಿಸ್ತಾನದ ಆರ್ಥಿಕ ಸುಸ್ಥಿರತೆ ಮತ್ತು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯ ಸುಧಾರಣೆಗಾಗಿ 80 ಕೋಟಿ ಅಮೆರಿಕನ್‌ ಡಾಲರ್‌ ಮೊತ್ತದ ನೆರವು ಒದಗಿಸುವ ಯೋಜನೆಗೆ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಒಪ್ಪಿಗೆ ನೀಡಿದೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.

ಈ ವಿಷಯವನ್ನು ಖಚಿತಪಡಿಸಿರುವ ಪಾಕಿಸ್ತಾನದ ವಿತ್ತ ಸಚಿವರ ಸಲಹೆಗಾರ ಖುರ್ರಂ ಶೆಹಜಾದ್‌, ‘ಸಂಪನ್ಮೂಲ ಕ್ರೋಢೀಕರಣ ಸುಧಾರಣಾ ಯೋಜನೆಯಡಿ 80 ಕೋಟಿ ಡಾಲರ್‌ ನೀಡಲು ಎಡಿಬಿ ಸಮ್ಮತಿಸಿದೆ. ಈ ಯೋಜನೆಯು 30 ಕೋಟಿ ಡಾಲರ್‌ ಮೊತ್ತದ ನೀತಿ ಆಧಾರಿತ ಸಾಲ ಮತ್ತು 50 ಕೋಟಿ ಡಾಲರ್‌ ಮೊತ್ತದ ಕಾರ್ಯಕ್ರಮ ಆಧಾರಿತ ಖಾತರಿಯನ್ನು ಒಳಗೊಂಡಿದೆ’ ಎಂದು ತಿಳಿಸಿದ್ದಾರೆ.

‘ಸಂಪನ್ಮೂಲ ಕ್ರೋಢೀಕರಣ ಮತ್ತು ಬಳಕೆಯ ಸುಧಾರಣೆಗೆ ಸಂಬಂಧಿಸಿದ ಎರಡನೇ ಉಪ ಯೋಜನೆಯಡಿ ಪಾಕಿಸ್ತಾನಕ್ಕೆ 80 ಕೋಟಿ ಅಮೆರಿಕನ್‌ ಡಾಲರ್‌ ನೆರವು ಒದಗಿಸಲಾಗುತ್ತಿದೆ. ಇದರಲ್ಲಿ 50 ಕೋಟಿ ಡಾಲರ್‌ ಮೊತ್ತದ ನೀತಿ ಆಧಾರಿತ ಖಾತರಿಯೂ ಸೇರಿದೆ. ಇದು ತಾನು ಮೊತ್ತಮೊದಲಿಗೆ ಒದಗಿಸುತ್ತಿರುವ ಇಂತಹ ಖಾತರಿ. ಇದರಿಂದ ಪಾಕಿಸ್ತಾನ ಸರ್ಕಾರವು ವಾಣಿಜ್ಯ ಬ್ಯಾಂಕ್‌ಗಳಿಂದ 1 ಶತಕೋಟಿ ಡಾಲರ್‌ ಮೊತ್ತದ ಸಂಪನ್ಮೂಲವನ್ನು ಸಂಗ್ರಹಿಸಲು ಸಾಧ್ಯವಾಗಲಿದೆ’ ಎಂದು ಎಡಿಬಿ ಪ್ರಕಟಣೆಯಲ್ಲಿ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.