ADVERTISEMENT

ಅಫ್ಗಾನಿಸ್ತಾನ: ಬಾಂಬ್‌ ದಾಳಿ ಮೂವರು ಬಲಿ

ಏಜೆನ್ಸೀಸ್
Published 16 ಅಕ್ಟೋಬರ್ 2019, 19:58 IST
Last Updated 16 ಅಕ್ಟೋಬರ್ 2019, 19:58 IST

ಜಲಾಲಾಬಾದ್‌, ಅಫ್ಗಾನಿಸ್ತಾನ: ಪೊಲೀಸ್‌ ಠಾಣೆಯನ್ನು ಗುರಿಯಾಗಿಸಿ ತಾಲಿಬಾನ್‌ ಉಗ್ರರು ನಡೆಸಿದ ಬಾಂಬ್‌ ದಾಳಿಯಲ್ಲಿ ಮೂವರು ಮೃತಪ‍ಟ್ಟಿದ್ದು, 20 ಮಕ್ಕಳು ಸೇರಿದಂತೆ 27 ಮಂದಿ ಗಾಯಗೊಂಡಿದ್ದಾರೆ.

ಈಶಾನ್ಯ ಲಾಗ್‌ಮಾನ್‌ ಪ್ರಾಂತ್ಯದಲ್ಲಿರುವ ಆಲಿಶಿಂಗ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಬುಧವಾರ ಬೆಳಿಗ್ಗೆ ಘಟನೆ ಸಂಭವಿಸಿದೆ.

ಮೃತರಲ್ಲಿ ಇಬ್ಬರು ಯೋಧರು ಸೇರಿದ್ದಾರೆ. ಠಾಣೆಯ ಸಮೀಪದಲ್ಲಿದ್ದಧಾರ್ಮಿಕ ಶಾಲೆ ಭಾಗಶಃ ಧ್ವಂಸಗೊಂಡಿದೆ.

ADVERTISEMENT

ಉಗ್ರರು ಟ್ರಕ್‌ ಬಳಸಿ ದಾಳಿ ನಡೆಸಿದ್ದರುಎಂದು ಇಲ್ಲಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.