ADVERTISEMENT

ನಾನೀಗ ಅಫ್ಗಾನಿಸ್ತಾನದ ಉಸ್ತುವಾರಿ ಅಧ್ಯಕ್ಷ: ಉಪಾಧ್ಯಕ್ಷ ಅಮರುಲ್ಲಾ ಸಲೇಹ್

ಏಜೆನ್ಸೀಸ್
Published 17 ಆಗಸ್ಟ್ 2021, 17:01 IST
Last Updated 17 ಆಗಸ್ಟ್ 2021, 17:01 IST
ಅಫ್ಗಾನಿಸ್ತಾನದ ಉಪಾಧ್ಯಕ್ಷ ಅಮರುಲ್ಲಾ ಸಲೇಹ್: ಎಎಫ್‌ಪಿ ಚಿತ್ರ
ಅಫ್ಗಾನಿಸ್ತಾನದ ಉಪಾಧ್ಯಕ್ಷ ಅಮರುಲ್ಲಾ ಸಲೇಹ್: ಎಎಫ್‌ಪಿ ಚಿತ್ರ   

ಕಾಬೂಲ್: ಕಾಬೂಲ್‌ ನಗರಕ್ಕೆ ತಾಲಿಬಾನ್ ಉಗ್ರರು ಅಡಿ ಇಡುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡಿದ್ದಾರೆ. ಸದ್ಯ, ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಮಧ್ಯೆ, ನಾನು ದೇಶದ ‘ಕಾನೂನುಬದ್ಧ’ ಉಸ್ತುವಾರಿ ಅಧ್ಯಕ್ಷ ಎಂದು ಆಫ್ಗಾನ್ ಉಪಾಧ್ಯಕ್ಷರು ಪ್ರತಿಪಾದಿಸುತ್ತಿದ್ದಾರೆ.

ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಮಂಗಳವಾರ ಈ ಬಗ್ಗೆ ಟ್ವಿಟರ್‌ನಲ್ಲಿ ಹೇಳಿಕೆ ನೀಡಿದ್ದು, ಈ ಘೋಷಣೆ ಮಾಡಲು ಆಫ್ಗಾನ್ ಸಂವಿಧಾನ ನನಗೆ ಅಧಿಕಾರ ನೀಡಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಸರ್ಕಾರ ನಡೆಸುವ ನಿಟ್ಟಿನಲ್ಲಿ ‘ಎಲ್ಲಾ ನಾಯಕರ ಬೆಂಬಲ ಮತ್ತು ಒಮ್ಮತವನ್ನು ಪಡೆದುಕೊಳ್ಳಲು ಪ್ರಯತ್ನಿಸುವುದಾಗಿ’ ಅವರು ಬರೆದುಕೊಂಡಿದ್ದಾರೆ.

ಕಾಬೂಲ್ ಆಕ್ರಮಣದ ಬಳಿಕ, ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಮತ್ತು ಶಾಂತಿ ಮಂಡಳಿ ಮುಖ್ಯಸ್ಥ ಅಬ್ದುಲ್ಲಾ ಸೇರಿದಂತೆ ಆಫ್ಗಾನ್‌ನ ನಾಯಕರೆಲ್ಲರೂ ತಾಲಿಬಾನ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.