ADVERTISEMENT

ಸಿಡ್ನಿ ಪ್ರವಾಹ: 32 ಸಾವಿರ ಜನರ ಸ್ಥಳಾಂತರಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 13:29 IST
Last Updated 4 ಜುಲೈ 2022, 13:29 IST
ಸಿಡ್ನಿಯ ವಿಂಡ್ಸರ್‌ ಉಪನಗರದಲ್ಲಿ ತುಂಬಿ ಹರಿಯುತ್ತಿರುವ ಹೌಕೆಸ್‌ಬರಿ ನದಿಯಿಂದ ಪ್ರವಾಹ ಉಂಟಾಗಿರುವುದು  –ಎಎಫ್‌ಪಿ ಚಿತ್ರ
ಸಿಡ್ನಿಯ ವಿಂಡ್ಸರ್‌ ಉಪನಗರದಲ್ಲಿ ತುಂಬಿ ಹರಿಯುತ್ತಿರುವ ಹೌಕೆಸ್‌ಬರಿ ನದಿಯಿಂದ ಪ್ರವಾಹ ಉಂಟಾಗಿರುವುದು  –ಎಎಫ್‌ಪಿ ಚಿತ್ರ   

ಸಿಡ್ನಿ (ಎಪಿ): ಪ್ರವಾಹ ಭೀಕರತೆಯಿಂದ ಸಿಡ್ನಿ ಮತ್ತು ಅದರ ಸುತ್ತಮುತ್ತಲಿನ 30 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲು ಅಥವಾ ತಮ್ಮ ಮನೆ ತ್ಯಜಿಸಲು ಸಿದ್ಧರಾಗಿರುವಂತೆಸೋಮವಾರ ಸೂಚಿಸಲಾಗಿದೆ.

ನಗರದಲ್ಲಿ ಶುಕ್ರವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಅಣೆಕಟ್ಟೆಗಳು ತುಂಬಿ ಹರಿಯುತ್ತಿವೆ ಮತ್ತು ಹಲವು ಮಾರ್ಗಗಳು ಸಂಪರ್ಕ ಕಡಿದುಕೊಂಡಿವೆ. ನಗರದ 50 ಲಕ್ಷ ಜನರು ಪ್ರವಾಹದ ತುರ್ತು ಪರಿಸ್ಥಿತಿ ಎದುರಿಸುವಂತಾಗಿದೆ.

’ಸದ್ಯದ ಮಾಹಿತಿ ಪ್ರಕಾರ ಕಳೆದ 18 ತಿಂಗಳಲ್ಲಿ ಉಂಟಾದ ಪ್ರವಾಹಗಳಲ್ಲಿ ಇದು ಭೀಕರವಾಗಿದೆ. ಪ್ರಸ್ತುತ ಪ್ರವಾಹವು ಹಲವು ಪ್ರದೇಶಗಳಿಗೆ ಹಾನಿ ಉಂಟು ಮಾಡಲಿದೆ. ಸ್ಥಳಾಂತರಿಸುವ ಆದೇಶದಿಂದ ಜನರು ಆತಂಕಗೊಂಡಿದ್ದಾರೆ ‘ ಎಂದು ವಿಪತ್ತು ನಿರ್ವಹಣಾ ಸಚಿವ ಮುರ್ರೆ ವ್ಯಾಟ್ ಅವರು ಆಸ್ಟ್ರೇಲಿಯಾ ಬ್ರಾಡ್‌ಕಾಸ್ಟಿಂಗ್‌ ಕಾರ್ಪೋರೇಷನ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.