ADVERTISEMENT

ಆರೋಗ್ಯ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ: ಆರ್ಥಿಕ ನೆರವಿಗೆ ಡಬ್ಲ್ಯುಎಚ್‌ಒ ಮನವಿ

​ಪ್ರಜಾವಾಣಿ ವಾರ್ತೆ
Published 20 ಮೇ 2025, 15:49 IST
Last Updated 20 ಮೇ 2025, 15:49 IST
   

ಜಿನೀವಾ: ಆರೋಗ್ಯ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆರ್ಥಿಕ ನೆರವು ಒದಗಿಸಬೇಕೆಂದು ತನ್ನ ಸದಸ್ಯ ರಾಷ್ಟ್ರಗಳಿಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮನವಿ ಮಾಡಿದೆ.

ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಬ್ಲ್ಯುಎಚ್‌ಒಗೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿದ್ದಾರೆ. ಇದರಿಂದ ಆರ್ಥಿಕ ಸಮಸ್ಯೆ ಎದುರಾಗಿದೆ ಎಂದಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಬಜೆಟ್‌ ₹17,972 ಕೋಟಿ (2.1 ಬಿಲಿಯನ್‌ ಡಾಲರ್‌). ತಂಬಾಕು ಉತ್ಪನ್ನ ಕಂಪನಿಗಳು ಒಂದು ವರ್ಷದ ಅವಧಿಯಲ್ಲಿ ಇಷ್ಟು ಮೊತ್ತವನ್ನು ಜಾಹೀರಾತಿಗಾಗಿ ವಿನಿಯೋಗಿಸುತ್ತಿವೆ ಎಂದೂ ಹೇಳಿದೆ.

ADVERTISEMENT

ಪ್ರತಿ ಎಂಟು ಗಂಟೆಯ ಜಾಗತಿಕ ಮಿಲಿಟರಿ ವೆಚ್ಚಕ್ಕೆ ಡಬ್ಲ್ಯುಎಚ್‌ಒನ ಬಜೆಟ್‌ ಸಮನಾಗಿದೆ. ತಂಬಾಕು ಹಾಗೂ ಯುದ್ಧದಿಂದ ಜನರು ಮೃತಪಟ್ಟರೆ, ವಿಶ್ವ ಆರೋಗ್ಯ ಸಂಸ್ಥೆಯು ಕಳೆದ 80 ವರ್ಷಗಳಿಂದ ಮನುಷ್ಯನ ಜೀವನ ಹಾಗೂ ಆರೋಗ್ಯ ಸುಧಾರಣೆಗಾಗಿ ಶ್ರಮಿಸುತ್ತಿದೆ ಎಂದಿದೆ.

ಸಂದಿಗ್ಧ ಸಮಯದಲ್ಲಿ ಸದಸ್ಯ ರಾಷ್ಟ್ರಗಳು ನೆರವು ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧನೊಮ್ ಘೆಬ್ರೆಯೆಸಸ್ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.