ADVERTISEMENT

‘ಎಐ’ ಸಂಶೋಧಕ ಅಲ್ಲ: ಬ್ರಿಟನ್‌ ಸುಪ್ರೀಂ ಕೋರ್ಟ್‌

ಕೃತಕ ಬುದ್ಧಿಮತ್ತೆ ಬಳಸಿ ಮಾಡಿದ ಸಂಶೋಧನೆಗೆ ಪೇಟೆಂಟ್‌ ನಿರಾಕರಣೆ

ರಾಯಿಟರ್ಸ್‌
Published 20 ಡಿಸೆಂಬರ್ 2023, 16:34 IST
Last Updated 20 ಡಿಸೆಂಬರ್ 2023, 16:34 IST
-
-   

ಲಂಡನ್‌: ಯಾವುದೇ ಸಂಶೋಧನೆಗೆ ಸಂಬಂಧಿಸಿ ಪೇಟೆಂಟ್‌ (ಏಕಸ್ವಾಮ್ಯ) ಪಡೆಯಬೇಕಾದಲ್ಲಿ ಮಾನವ ಅಥವಾ ಸಂಸ್ಥೆಯೊಂದು ಸಂಶೋಧನೆ ಮಾಡಿರಬೇಕು. ಕೃತಕ ಬುದ್ಧಿಮತ್ತೆ (ಎಐ) ಅಥವಾ ಯಂತ್ರದ ನೆರವಿನಿಂದ ಮಾಡಿದ ಸಂಶೋಧನೆಗೆ ಪೇಟೆಂಟ್‌ ನೀಡಲು ಸಾಧ್ಯವಿಲ್ಲ ಎಂದು ಬ್ರಿಟನ್‌ ಸುಪ್ರೀಂ ಕೋರ್ಟ್‌ ಬುಧವಾರ ಮಹತ್ವದ ತೀರ್ಪು ನೀಡಿದೆ.

‘ಕೃತಕ ಬುದ್ಧಿಮತ್ತೆಯನ್ನು ಸಂಶೋಧಕ ಎಂಬುದಾಗಿ ಪರಿಗಣಿಸಲಾಗದು’ ಎಂದು ನ್ಯಾಯಮೂರ್ತಿ ಡೇವಿಡ್ ಕಿಚಿನ್‌ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಅಮೆರಿಕದ ಕಂಪ್ಯೂಟರ್‌ ವಿಜ್ಞಾನಿ ಸ್ಟೀಫನ್‌ ಥೇಲರ್ ಎಂಬುವವರು ಕೃತಕ ಬುದ್ಧಿಮತ್ತೆಯಿಂದ ಕಾರ್ಯ ನಿರ್ವಹಿಸುವ ‘ಡಿಎಬಿಯುಸ್’ ಹೆಸರಿನ ‘ಸೃಜನಶೀಲ ಯಂತ್ರ’ ಬಳಸಿ ಮಾಡಿರುವ ಸಂಶೋಧನೆಗಳಿಗೆ ಪೇಟೆಂಟ್‌ ನೋಂದಣಿಗಾಗಿ ಬ್ರಿಟನ್‌ನ ಬೌದ್ಧಿಕ ಹಕ್ಕು ಕಚೇರಿಗೆ (ಐಪಿಒ) ಅರ್ಜಿ ಸಲ್ಲಿಸಿದ್ದರು.

ADVERTISEMENT

ಕೃತಕ ಬುದ್ಧಿಮತ್ತೆಯನ್ನು ಸಂಶೋಧಕ ಎಂಬುದಾಗಿ ಪರಿಗಣಿಸಲಾಗದು ಎಂಬ ಕಾರಣ ನೀಡಿ, ಸ್ವೀಫನ್‌ ಅವರ ಅರ್ಜಿಯನ್ನು ಐಪಿಒ ತಿರಸ್ಕರಿಸಿತ್ತು.

ಐಪಿಒ ಆದೇಶ ಪ್ರಶ್ನಿಸಿ ಸ್ವೀಫನ್‌ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.