ADVERTISEMENT

ಭಾರತದಲ್ಲಿ ಎಐ ಬಳಕೆಗೆ ಅಮೆರಿಕನ್ನರು ಹಣ ಏಕೆ ನೀಡಬೇಕು: ಪೀಟರ್ ನವಾರೋ ಪ್ರಶ್ನೆ

ಪಿಟಿಐ
Published 18 ಜನವರಿ 2026, 23:30 IST
Last Updated 18 ಜನವರಿ 2026, 23:30 IST
   

ನ್ಯೂಯಾರ್ಕ್/ವಾಷಿಂಗ್ಟನ್: ಭಾರತದ ವಿರುದ್ಧ ಹೊಸದಾಗಿ ಟೀಕಾಪ್ರಹಾರ ನಡೆಸಿರುವ ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವಾರೋ, ‘ಭಾರತದಲ್ಲಿ ಕೃತಕಬುದ್ಧಿಮತ್ತೆ(ಎಐ) ಬಳಕೆಗೆ ಸಂಬಂಧಿಸಿ ಅಮೆರಿಕನ್ನರು ಹಣ ಏಕೆ ಪಾವತಿಸಬೇಕು’ ಎಂದು ಪ್ರಶ್ನಿಸಿದ್ದಾರೆ.

‘ರಿಯಲ್‌ ಅಮೆರಿಕಾಸ್‌ ವಾಯ್ಸ್‌’ಗೆ ಸಂದರ್ಶನ ನೀಡಿರುವ ಅವರು,‘ಉದಾಹರಣೆಗೆ, ಚಾಟ್‌ಜಿಪಿಟಿ ಅಮೆರಿಕದಿಂದಲೇ ಕಾರ್ಯಾಚರಣೆ ನಡೆಸುತ್ತಿದೆ. ಇಲ್ಲಿಯ ವಿದ್ಯುತ್‌ ಬಳಕೆ ಮಾಡುತ್ತಿದೆ. ಭಾರತ, ಚೀನಾ ಸೇರಿ ಜಗತ್ತಿನಾದ್ಯಂತ ದೊಡ್ಡಸಂಖ್ಯೆಯಲ್ಲಿ ಜನರನ್ನು ಇದನ್ನು ಬಳಸುತ್ತಿದ್ದಾರೆ. ಹೀಗಿರುವಾಗ, ಭಾರತದಲ್ಲಿರುವ ಅಮೆರಿಕನ್ನರು ಎಐ ಬಳಸಲು ಹಣ ಏಕೆ ನೀಡಬೇಕು’ ಎಂದು ಪ್ರಶ್ನಿಸಿದ್ದಾರೆ.

ಸುಂಕಗಳ ವಿಚಾರದಲ್ಲಿ ಅಮೆರಿಕ ಮತ್ತು ಭಾರತ ನಡುವಿನ ಸಂಬಂಧದಲ್ಲಿ ಒಡಕು ಕಾಣಿಸಿಕೊಂಡಿರುವ ಈ ಸಂದರ್ಭದಲ್ಲಿ, ನವಾರೋ ಅವರು ಭಾರತ ವಿರುದ್ಧದ ಟೀಕೆಯನ್ನು ಮತ್ತಷ್ಟು ಹರಿತಗೊಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.