ಇರ್ಬಿಲ್ (ಇರಾಕ್) (ಎಪಿ): ಉತ್ತರ ಇರಾಕ್‌ನ ಅರೆ ಸ್ವಾಯತ್ತ ಕುರ್ದಿಶ್ ಪ್ರದೇಶದ ಮಿಲಿಟರಿ ವಿಮಾನ ನಿಲ್ದಾಣದ ಮೇಲೆ ಸೋಮವಾರ ನಡೆದ ವೈಮಾನಿಕ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಸುಲೇಮಾನಿಯಾ ನಗರದ ಆಗ್ನೇಯಕ್ಕೆ 28 ಕಿಲೋಮೀಟರ್ ದೂರದಲ್ಲಿರುವ ಅರ್ಬತ್ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಕುರ್ದಿಶ್ ಪೆಶ್ಮೆರ್ಗಾ ಪಡೆಗಳ ಮೂವರು ಸದಸ್ಯರು ಗಾಯಗೊಂಡಿದ್ದಾರೆ ಎಂದು ಭಯೋತ್ಪಾದನಾ ನಿಗ್ರಹ ದಳ ಹೇಳಿಕೆಯಲ್ಲಿ ತಿಳಿಸಿದೆ.
ಸುಲೈಮಾನಿಯಾದಲ್ಲಿ ಅಧಿಕಾರದಲ್ಲಿರುವ ಕುರ್ದಿಸ್ತಾನದ ಪೇಟ್ರಿಯಾಟಿಕ್ ಯೂನಿಯನ್‌ನೊಂದಿಗೆ ಸಂಯೋಜಿತವಾಗಿರುವ ಭಯೋತ್ಪಾದನಾ ವಿರೋಧಿ ಘಟಕದ ತರಬೇತಿಗೆ ಅನುಕೂಲವಾಗುವಂತೆ ಇತ್ತೀಚೆಗಷ್ಟೇ ವಿಮಾನ ನಿಲ್ದಾಣವನ್ನು ನವೀಕರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.