ADVERTISEMENT

ನನ್ನ ಪತಿ ಪ್ರಧಾನಿಯಾಗಿದ್ದಾಗ ಪರಂಪರೆಯನ್ನು ಬಿಟ್ಟಿರಲಿಲ್ಲ: ಅಕ್ಷತಾ ಮೂರ್ತಿ

ಪಿಟಿಐ
Published 24 ನವೆಂಬರ್ 2025, 15:55 IST
Last Updated 24 ನವೆಂಬರ್ 2025, 15:55 IST
   

ಲಂಡನ್: ‘ನನ್ನ ಪತಿ ಯುನೈಟೆಡ್ ಕಿಂಗ್‌ಡಮ್ ಚಾನ್ಸಲರ್ ಆಗಿದ್ದಾಗ ಮತ್ತು ನಂತರ ಬ್ರಿಟನ್‌ನ ಪ್ರಧಾನಿಯಾಗಿದ್ದಾಗ ಅಧಿಕೃತ ನಿವಾಸದಲ್ಲೂ (ಡೌನಿಂಗ್ ಸ್ಟ್ರೀಟ್) ಸಾಂಸ್ಕೃತಿಕ ಆಚರಣೆಯನ್ನು ಮುಂದುವರಿಸಿದ್ದೆವು ಮತ್ತು ಎಂದಿಗೂ ಪರಂಪರೆಯಿಂದ ದೂರ ಸರಿದಿರಲಿಲ್ಲ’ ಎಂದು ಬ್ರಿಟನ್‌ನ ಭಾರತ ಮೂಲದ ಮೊದಲ ಪ್ರಧಾನಿ ಎಂದೇ ಹೆಸರಾದ ರಿಷಿ ಸುನಕ್ ಅವರ ಪತ್ನಿ, ಉದ್ಯಮಿ ಅಕ್ಷತಾ ಮೂರ್ತಿ ಹೇಳಿದ್ದಾರೆ.

ವಾರಾಂತ್ಯದಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಭಾರತೀಯ ವಿದ್ಯಾ ಭವನದಲ್ಲಿ ನಡೆದ ದೀಪಾವಳಿ ವಾರ್ಷಿಕ ನಿಧಿ ಸಂಗ್ರಹಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಪರಂಪರೆಯನ್ನು ಮುಂದುವರಿಸುವಲ್ಲಿ ಭಾರತೀಯ ವಿದ್ಯಾ ಭವನ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.

2020 ಮತ್ತು 2024ರಲ್ಲಿ ರಿಷಿ ಸುನಕ್ ಅವರು ಯುನೈಟೆಡ್‌ ಕಿಂಗ್‌ಡಂನ ಚಾನ್ಸೆಲರ್ ಆಗಿದ್ದಾಗ ಮತ್ತು ನಂತರ ದೇಶದ ಪ್ರಧಾನಿಯಾಗಿದ್ದಾಗಲೂ ಡೌನಿಂಗ್ ಸ್ಟ್ರೀಟ್‌ನ ಪ್ರಖ್ಯಾತ ಕಪ್ಪು ಬಾಗಿಲಿನ ಮುಂದೆ ದೀಪಗಳನ್ನು ಬೆಳಗಿಸಿದ್ದು, ರಂಗೋಲಿ ಬಿಡಿಸಿದ್ದು ಮತ್ತು ಮೇಲಿನ ಮಹಡಿಯ ಅಡುಗೆ ಮನೆಯಲ್ಲಿ ರಸಂ ಸಿದ್ಧ ಮಾಡಿದ್ದನ್ನು ಅಕ್ಷತಾ ಮೂರ್ತಿ ನೆನಪಿಸಿಕೊಂಡಿದ್ದಾರೆ.

ADVERTISEMENT

ಕಾರ್ಯಕ್ರಮದಲ್ಲಿ ಅವರ ತಂದೆ, ಇನ್ಫೊಸಿಸ್ ಸಹ–ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅತ್ತೆ–ಮಾವ ಯಶ್‌, ಉಷಾ ಸುನಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.