ADVERTISEMENT

ಆಸ್ಟ್ರೇಲಿಯಾ ನೂತನ ಪ್ರಧಾನಿಯಾಗಿ ಆ್ಯಂಟನಿ ಅಲ್ಬನೀಸ್‌ ಪ್ರಮಾಣ ಸ್ವೀಕಾರ

ಪ್ರಮಾಣ ಸ್ವೀಕರಿಸಿದ ಬೆನ್ನಲ್ಲೇ ಕ್ವಾಡ್‌ ಶೃಂಗದಲ್ಲಿ ಪಾಲ್ಗೊಳ್ಳಲು ಟೋಕಿಯೊಗೆ ಪ್ರಯಾಣ

ಏಜೆನ್ಸೀಸ್
Published 23 ಮೇ 2022, 13:57 IST
Last Updated 23 ಮೇ 2022, 13:57 IST
ಆಸ್ಟ್ರೇಲಿಯಾ ನೂತನ ಪ್ರಧಾನಿಯಾಗಿ ಆ್ಯಂಟನಿ ಅಲ್ಬನೀಸ್ ಅವರು ಸೋಮವಾರ ಗವರ್ನರ್‌ ಜನರಲ್‌ ಡೇವಿಡ್ ಹಾರ್ಲೆ ಅವರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು –ಎಎಫ್‌ಪಿ ಚಿತ್ರ
ಆಸ್ಟ್ರೇಲಿಯಾ ನೂತನ ಪ್ರಧಾನಿಯಾಗಿ ಆ್ಯಂಟನಿ ಅಲ್ಬನೀಸ್ ಅವರು ಸೋಮವಾರ ಗವರ್ನರ್‌ ಜನರಲ್‌ ಡೇವಿಡ್ ಹಾರ್ಲೆ ಅವರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು –ಎಎಫ್‌ಪಿ ಚಿತ್ರ   

ಕ್ಯಾನ್‌ಬೆರಾ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ಆ್ಯಂಟನಿ ಅಲ್ಬನೀಸ್ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ಅದರ ಬೆನ್ನಲ್ಲೇ ಅಲ್ಬನೀಸ್‌ ಕ್ವಾಡ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳಲುಜಪಾನ್‌ನ ಟೋಕಿಯೊಗೆ ತೆರಳಿದರು.

ಆಸ್ಟ್ರೇಲಿಯಾ ಸಂಸತ್ತಿಗೆ ಶನಿವಾರ ನಡೆದ ಚುನಾವಣೆಯಲ್ಲಿವಿಪಕ್ಷ ಲೇಬರ್ ಪಾರ್ಟಿ ಈಗಾಗಲೇ ಸರಳ ಬಹುಮತ ಪಡೆದುಕೊಂಡಿದ್ದು, ಮತ ಎಣಿಕೆ ಕಾರ್ಯ ಮುಂದುವರಿದಿದೆ. ಈ ಮೂಲಕ ಸತತ 9 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸ್ಕಾಟ್‌ ಮಾರಿಸನ್‌ ನೇತೃತ್ವದ ಕನ್ಸರ್ವೇಟಿವ್‌ ಪಕ್ಷವನ್ನು ಲೇಬರ್‌ ಪಾರ್ಟಿ ಪರಾಭವಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT