ADVERTISEMENT

ಪ್ರಕೃತಿ ವಿಕೋಪ: ಬ್ರಿಟನ್‌ ಜನರ ಮೊಬೈಲ್‌ಗೆ ಮುನ್ನೆಚ್ಚರಿಕೆ ಸಂದೇಶ ರವಾನೆ

ಪಿಟಿಐ
Published 19 ಮಾರ್ಚ್ 2023, 14:25 IST
Last Updated 19 ಮಾರ್ಚ್ 2023, 14:25 IST
.
.   

ಲಂಡನ್‌ (ಪಿಟಿಐ): ಪ್ರವಾಹ, ಕಾಳ್ಗಿಚ್ಚು ಸೇರಿದಂತೆ ವಿವಿಧ ಪ್ರಕೃತಿ ವಿಕೋಪದಿಂದ ಜನರನ್ನು ರಕ್ಷಿಸುವ ಸಂಬಂಧ ಹೊಸ ಸಾರ್ವಜನಿಕ ಎಚ್ಚರಿಕಾ ವ್ಯವಸ್ಥೆಯನ್ನು ಜಾರಿಗೊಳಿಸಲು ಬ್ರಿಟನ್‌ ಸರ್ಕಾರ ಸಿದ್ಧತೆ ನಡೆಸಿದೆ.

‘ಹವಾಮಾನ ಸಂಬಂಧಿ ಅಪಾಯಗಳ ಕುರಿತು ಮುನ್ನೆಚ್ಚರಿಕೆ ನೀಡಲು ಜನರ ಮೊಬೈಲ್‌ಗಳಿಗೆ ಸೈರನ್‌ ರೀತಿಯ ಎಚ್ಚರಿಕೆಯ ಸಂದೇಶ ನೀಡಲು ಮುಂದಾಗಿದ್ದೇವೆ. ಇದರ ಪರೀಕ್ಷಾರ್ಥ ಏಪ್ರಿಲ್‌ 23ರ ಸಂಜೆ ದೇಶದಾದ್ಯಂತ ಜನರ ಮೊಬೈಲ್‌ಗಳಿಗೆ ಎಚ್ಚರಿಕೆ ಸಂದೇಶ ನೀಡಲು ನಿರ್ಧರಿಸಿದ್ದೇವೆ. ಈ ವೇಳೆ ಜನರ ಮೊಬೈಲ್‌ಗಳಿಗೆ ಮುನ್ನೆಚ್ಚರಿಕೆ ಸಂದೇಶ ರವಾನಿಸಲಾಗುವುದು’ ಎಂದು ಬ್ರಿಟನ್‌ ಸರ್ಕಾರ ಭಾನುವಾರ ಮಾಹಿತಿ ನೀಡಿದೆ.

‘ದಿಢೀರ್‌ ಸಂಭವಿಸುವ ಹವಾಮಾನ ಸಂಬಂಧಿ ಅಪಾಯಗಳ ಕಾರಣದಿಂದಾಗಿ ಜನರ ಪ್ರಾಣಗಳು ಸಂಕಷ್ಟಕ್ಕೆ ಸಿಲುಕಿಕೊಳ್ಳುವಂಥ ಸಂದರ್ಭದಲ್ಲಿ ಮಾತ್ರವೇ ಇಂಥ ಸಂದೇಶಗಳನ್ನು ಕಳುಹಿಸಲಾಗುವುದು’ ಎಂದು ಸರ್ಕಾರ ಹೇಳಿದೆ.

ADVERTISEMENT

‘ಯಾವ ಯಾವ ಸಂದರ್ಭಗಳಲ್ಲಿ ಇಂಥ ಎಚ್ಚರಿಕೆಯ ಸಂದೇಶಗಳನ್ನು ಕಳುಹಿಸಬೇಕು ಎಂಬ ಪಟ್ಟಿಯನ್ನು ಮಾಡಿಕೊಂಡಿದ್ದೇವೆ. ಈ ಪಟ್ಟಿಯಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಸೇರಿಸಿಕೊಳ್ಳಬಹುದು. ಆದರೆ, ಸದ್ಯ ಇದು ಈ ಪಟ್ಟಿಯಲ್ಲಿಲ್ಲ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.