ADVERTISEMENT

ಭಾರತ, ಪಾಕಿಸ್ತಾನ ಜೊತೆ ನಮ್ಮ ಸಂಬಂಧ ಉತ್ತಮವಾಗಿದೆ: ಅಮೆರಿಕ

ಪಿಟಿಐ
Published 13 ಆಗಸ್ಟ್ 2025, 7:59 IST
Last Updated 13 ಆಗಸ್ಟ್ 2025, 7:59 IST
REUTERS/Kevin Lamarque
   REUTERS/Kevin Lamarque

ನ್ಯೂಯಾರ್ಕ್/ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ಜೊತೆ ಉತ್ತಮ ಸಂಬಂಧ ಹೊಂದಿರುವುದಾಗಿ ಅಮೆರಿಕದ ವಿದೇಶಾಂಗ ಇಲಾಖೆ ಮಂಗಳವಾರ ಹೇಳಿದೆ.

'ಸಿಡ್ ಮತ್ತು ಫ್ರೆಂಡ್ಸ್ ಇನ್ ದಿ ಮಾರ್ನಿಂಗ್' ಸಂದರ್ಶನದಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆ ವಕ್ತಾರ ಟ್ಯಾಮಿ ಬ್ರೂಸ್, ಭಾರತ – ಪಾಕಿಸ್ತಾನ ಜೊತೆ ನಮ್ಮ ಸಂಬಂಧವು ಮೊದಲಿನಂತೆಯೇ ಇದೆ. ಆ ದೇಶಗಳೊಂದಿಗೆ ಕೆಲಸ ಮಾಡಲು ಅಮೆರಿಕ ಇಚ್ಚಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತ–ಪಾಕಿಸ್ತಾನದ ನಡುವೆ ಮೇ ತಿಂಗಳಿನಲ್ಲಿ ನಡೆದ ಸಂಘರ್ಷವನ್ನು ಉಲ್ಲೇಖಿಸಿದ ಬ್ರೂಸ್, ದಾಳಿಯ ಸ್ವರೂಪವನ್ನು ತಿಳಿದು ನಮ್ಮಿಂದಾಗುವ ಸಹಾಯವನ್ನು ಮಾಡಿದ್ದೇವೆ ಎಂದಿದ್ದಾರೆ.

ADVERTISEMENT

ಸಂದರ್ಶನವೊಂದರಲ್ಲಿ ಮಾತಾನಾಡಿದ ರುಬಿಯೊ, ಇಡೀ ಜಗತ್ತು ಶಾಂತಿಯಿಂದ ಇರಬೇಕೆಂದು ಟ್ರಂಪ್ ಬಯಸುತ್ತಾರೆ. ಆದ್ದರಿಂದ ಯಾವುದೇ ಸಂಘರ್ಷಗಳು ನಡೆದಾಗ ಸಂಧಾನದ ಮೂಲಕ ಬಗೆಹರಿಸಲು ಮುಂದಾಗುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಭಾರತ-ಪಾಕಿಸ್ತಾನ, ಥೈಲ್ಯಾಂಡ್-ಕಾಂಬೋಡಿಯಾ, ಅಜರ್ಬೈಜಾನ್–ಅರ್ಮೇನಿಯ ನಡುವಣ ಶಾಂತಿ ಒಪ್ಪಂದದ ಮೂಲಕ ಸಂಘರ್ಷ ಶಮನಗೊಳಿಸುವಲ್ಲಿ ನಾವು ಯಶಸ್ಸನ್ನು ಕಂಡಿದ್ದೇವೆ. ವಿಶ್ವದಾದ್ಯಂತ ಹಲವು ಸಂಘರ್ಷಗಳನ್ನು ಕೊನೆಗೊಳಿಸಲು ನೆರವಾದ ಕೀರ್ತಿ ಟ್ರಂಪ್‌ ಅವರಿಗೆ ಸಲ್ಲುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.