ADVERTISEMENT

ಬಾಂಬ್‌ ಬೆದರಿಕೆ: ರೋಮ್‌ನಲ್ಲಿ ಇಳಿದ ನ್ಯೂಯಾರ್ಕ್–ದೆಹಲಿ ವಿಮಾನ

ಪಿಟಿಐ
Published 24 ಫೆಬ್ರುವರಿ 2025, 13:20 IST
Last Updated 24 ಫೆಬ್ರುವರಿ 2025, 13:20 IST
   

ನ್ಯೂಯಾರ್ಕ್‌: ‘ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಅಮೆರಿಕ ಏರ್‌ಲೈನ್ಸ್‌ಗೆ ಸೇರಿದ ವಿಮಾನವನ್ನು ಬಾಂಬ್‌ ಬೆದರಿಕೆ ಕಾರಣದಿಂದಾಗಿ ರೋಮ್‌ನಲ್ಲಿ ಇಳಿಸಲಾಯಿತು. ನಂತರ ವಿಮಾನದಲ್ಲಿ ಕೂಲಂಕಷ ತಪಾಸಣೆ ನಡೆಸಿ, ಮರು ಹಾರಾಟಕ್ಕೆ ಅನುಮತಿ ನೀಡಲಾಗಿದೆ’ ಎಂದು ಏರ್‌ಲೈನ್ಸ್‌ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

‘ಮಂಗಳವಾರದ ಹೊತ್ತಿಗೆ ದೆಹಲಿಯತ್ತ ವಿಮಾನ ಪ್ರಯಾಣ ಬೆಳೆಸಲಿದೆ’ ಎಂದು ಹೇಳಿದೆ.

ಫೆ.22ರಂದು ನ್ಯೂಯಾರ್ಕ್‌ನ ಜಾನ್‌.ಎಫ್‌.ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕನ್‌ ಏರ್‌ಲೈನ್ಸ್‌ –292 ವಿಮಾನವು ದೆಹಲಿಯತ್ತ ಹೊರಟಿತ್ತು. ಮಾರ್ಗಮಧ್ಯದಲ್ಲಿ ಬೆದರಿಕೆಯ ಕಾರಣಕ್ಕೆ ರೋಮ್‌ನತ್ತ ತಿರುಗಿಸಲಾಯಿತು.

ADVERTISEMENT

‘ಭದ್ರತಾ ವಿಚಾರವಾಗಿ ವಿಮಾನ ಸಿಬ್ಬಂದಿಯೇ ಆತಂಕ ವ್ಯಕ್ತಪಡಿಸಿದ್ದರಿಂದ, ಫೆ.23ರ ಸಂಜೆ 5.30ಕ್ಕೆ ರೋಮ್‌ನ ಲಿಯನಾರ್ಡೊ ಡ ವಿಂಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಕೆಳಗಿಳಿಸಲಾಯಿತು’ ಎಂದು ಅಮೆರಿಕನ್‌ ಏರ್‌ಲೈನ್ಸ್‌ ತಿಳಿಸಿದೆ.

‘ವಿಮಾನದಲ್ಲಿದ್ದ 199 ಪ್ರಯಾಣಿಕರು‌ ಹಾಗೂ ಸಿಬ್ಬಂದಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.