ADVERTISEMENT

ಅಮೆರಿಕದ 20 ರಾಜ್ಯಗಳಲ್ಲಿ ಅಕ್ಟೋಬರ್‌ ತಿಂಗಳನ್ನು ಹಿಂದೂ ಪರಂಪರೆ ಮಾಸವಾಗಿ ಆಚರಣೆ

ಪಿಟಿಐ
Published 26 ಅಕ್ಟೋಬರ್ 2021, 6:49 IST
Last Updated 26 ಅಕ್ಟೋಬರ್ 2021, 6:49 IST
.
.   

ವಾಷಿಂಗ್ಟನ್‌: ಅಮೆರಿಕದ 50 ರಾಜ್ಯಗಳ ಪೈಕಿ, 20ಕ್ಕೂ ಹೆಚ್ಚು ರಾಜ್ಯಗಳು ಮತ್ತು 40ಕ್ಕೂ ಹೆಚ್ಚು ನಗರಗಳು ಅಕ್ಟೋಬರ್ ತಿಂಗಳನ್ನು ‘ಹಿಂದೂ ಪರಂಪರೆ ಮಾಸ‘ ಎಂದು ಆಚರಿಸುವುದಾಗಿ ಪ್ರಕಟಿಸಿವೆ ಎಂದು ಇಲ್ಲಿನ ಹಿಂದೂ ಸಮುದಾಯದ ಮುಖಂಡರು ಸೋಮವಾರ ತಿಳಿಸಿದ್ದಾರೆ.

ಹಿಂದೂ ಸಮುದಾಯದ ಪರವಾಗಿ ದೇಶದಲ್ಲಿ ಮೊದಲ ಬಾರಿಗೆ ಕೈಗೊಂಡಿರುವ ಈ ಉಪಕ್ರಮವನ್ನು ಚುನಾಯಿತ ಪ್ರತಿನಿಧಿಗಳು ಸ್ವಾಗತಿಸಿದ್ದಾರೆ. ಇಂಥದ್ದೊಂದು ಪ್ರಕಟಣೆ ಮತ್ತು ಅಧಿಸೂಚನೆಯನ್ನು ಹೊರಡಿಸುವ ಮೂಲಕ ಅಮೆರಿಕದಲ್ಲಿ ಅಲ್ಪಸಂಖ್ಯಾತ ಸಮುದಾಯದ ಕೊಡುಗೆಗಳನ್ನು ಗೌರವಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ವಿಶ್ವದಾದ್ಯಂತವಿರುವ ಹಿಂದೂ ಸಮುದಾಯದವರು ಅಕ್ಟೋಬರ್ ತಿಂಗಳ ಪೂರ್ತಿ ನವರಾತ್ರಿ, ದಸರಾ, ದುರ್ಗಾ ಪೂಜೆ ಮತ್ತು ದೀಪಾವಳಿ ಹಬ್ಬಗಳನ್ನು ಆಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಕೆಲವು ಹಿಂದೂ ಸಮುದಾಯದ ಗುಂಪುಗಳು ಅಕ್ಟೋಬರ್ ತಿಂಗಳನ್ನು ಹಿಂದೂ ಪರಂಪರೆ ಮಾಸವಾಗಿ ಆಚರಿಸುತ್ತಿವೆ ಎಂದು ಹಿಂದೂ ಸಮುದಾಯದ ಗುಂಪೊಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಅಮೆರಿಕದಲ್ಲಿ ಹಿಂದೂ ಸಮುದಾಯವು ಯೋಗದಿಂದ ಆಹಾರದವರೆಗೆ, ಹಬ್ಬ, ಉತ್ಸವಗಳಿಂದ ದಾನ–ದತ್ತಿವರೆಗೆ, ನೃತ್ಯಗಳಿಂದ ಸಂಗೀತದವರೆಗೆ, ಅಹಿಂಸೆಯಿಂದ ಆಳವಾದ ತತ್ವಶಾಸ್ತ್ರದವರೆಗೆ, ಜೀವನದ ಎಲ್ಲಾ ಹಂತಗಳನ್ನು ತಲುಪುತ್ತಿದೆ. ಈ ತಿಂಗಳನ್ನು ಹಿಂದೂ ಸಮುದಾಯದ ವೈಶಿಷ್ಟ್ಯವನ್ನು ಗುರುತಿಸುವಂತಹ ಎಲ್ಲ ಕಾರ್ಯಕ್ರಮಗಳನ್ನೂ ಹಿಂದೂ ಸಮುದಾಯದ ಗುಂಪುಗಳು, ಎಲ್ಲ ರೂಪಗಳಲ್ಲಿ ಆಚರಿಸುತ್ತಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.