ADVERTISEMENT

ಅನಾಟೊಲಿ ಲುಕ್ಯನೊವ್‌ ನಿಧನ

ಏಜೆನ್ಸೀಸ್
Published 10 ಜನವರಿ 2019, 20:15 IST
Last Updated 10 ಜನವರಿ 2019, 20:15 IST
ಅನಾಟೊಲಿ ಲುಕ್ಯನೊವ್‌
ಅನಾಟೊಲಿ ಲುಕ್ಯನೊವ್‌   

ಮಾಸ್ಕೊ: ಸೋವಿಯತ್‌ ರಷ್ಯಾ ಒಕ್ಕೂಟದ ಸುಪ್ರೀಂ ಸೋವಿಯತ್‌ನ ಕೊನೆಯ ಅಧ್ಯಕ್ಷ ಅನಾಟೊಲಿ ಲುಕ್ಯನೊವ್‌ (88) ಬುಧವಾರ ನಿಧನರಾದರು.

ಒಕ್ಕೂಟದ ನಾಯಕರಾಗಿದ್ದ ಮಿಖಾಯಿಲ್‌ ಗೊರ್ಬಚೆವ್‌ ಅವರ ನೀತಿಗಳನ್ನು ಉಗ್ರವಾಗಿ ಟೀಕಿಸುತ್ತಿದ್ದ ಅವರು, ಸೋವಿಯತ್‌ ಒಕ್ಕೂಟದ ಉನ್ನತ ನ್ಯಾಯ ಮಂಡಳಿಯಾಗಿದ್ದ ಸುಪ್ರೀಂ ಸೋವಿಯತ್‌ನ ಮೊದಲ ಚುನಾಯಿತ ಹಾಗೂ ಏಕೈಕ ಅಧ್ಯಕ್ಷರಾಗಿದ್ದರು.

ಗೋರ್ಬಚೆವ್‌ ಅವರ ನೀತಿಗಳನ್ನು ಬಹಿರಂಗವಾಗಿ ಟೀಕಿಸಿದ್ದರಿಂದ 1991ರಲ್ಲಿ ಅನಾಟೊಲಿಯವರನ್ನು ಬಂಧಿಸಲಾಗಿತ್ತು. ಚುನಾವಣೆ ನಡೆದ ನಂತರ ಗೊರ್ಬಚೆವ್‌ ಅವರ ಉತ್ತರಾಧಿಕಾರಿಯಾಗಿ ಅನಾಟೊಲಿ ಆಯ್ಕೆಯಾದರು. ಸುಪ್ರೀಂ ಸೋವಿಯತ್‌ ಅಧ್ಯಕ್ಷ ಸ್ಥಾನಕ್ಕೆ ಮೊದಲ ಬಾರಿಗೆ ಚುನಾವಣೆ ನಡೆದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.