ADVERTISEMENT

ಗಾಜಿನ ಬಾಗಿಲಿನಲ್ಲಿ ಪ್ರತಿಬಿಂಬ ಕಂಡು ಬಾಗಿಲು ಛಿದ್ರಗೊಳಿಸಿದ ಟಗರು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 10:38 IST
Last Updated 27 ನವೆಂಬರ್ 2019, 10:38 IST
   

ಟಗರು ತನ್ನ ಪ್ರತಿಬಿಂಬದೊಂದಿಗೆ ಜಗಳಕ್ಕಿಳಿದು ಮನೆಯ ಬಾಗಿಲ ಗಾಜನ್ನು ಪುಡಿಮಾಡಿದಘಟನೆಬ್ರಿಟನ್‌ನ ನಾಟಿಂಗ್‌ಹ್ಯಾಮ್‌ಶೈರ್‌ನಲ್ಲಿ ನಡೆದಿದೆ.

ಸೌತ್‌ವೆಲ್‌ನಿವಾಸಿ ಬಿಬಿಸಿ ಪತ್ರಕರ್ತ ಕ್ವೆಂಟಿನ್‌ ರೇನರ್‌ಅವರ ಮನೆಯ ಗಾಜಿನ ಬಾಗಿಲು ಟಗರುಕೋ‍‍ಪದಿಂದದ್ವಂಸವಾಗಿದೆ.

ಯಾರೋ ತನ್ನ ಮನೆಯ ಗಾಜಿನ ಬಾಗಿಲು ಧ್ವಂಸಗೊಳಿಸಿದ್ದಾರೆಎಂದು ಆತಂಕದಲ್ಲಿದ್ದ ರೇನರ್‌,ಇದು ಟಗರು ತನ್ನಪ್ರತಿಬಿಂಬದೊಂದಿಗಿನ ಜಗಳದಲ್ಲಿ ಸಂಭವಿಸಿದ್ದು ಎಂದು ತಿಳಿದುಆಶ್ಚರ್ಯಗೊಂಡಿದ್ದಾರೆ.

ADVERTISEMENT

'ಯಾರೋ ಕಿಡಿಗೇಡಿಗಳು ಹಾನಿ ಮಾಡಿದ್ದುಪೋಲಿಸರಿಗೆದೂರು ದಾಖಲಿಸುವಬಗ್ಗೆಚಿಂತಿಸುತ್ತಿದ್ದೆ, ಬಳಿಕ ಗಾರ್ಡನ್‌ನಲ್ಲಿ ಹುಲ್ಲು ಮೇಯುತ್ತಿರುವ ಟಗರುಕಂಡಬಳಿಕ ಇದು ಅದರ ಕೆಲಸವೇ ಇರಬೇಕೆಂದುನಮಗೆಮನವರಿಕೆಯಾಯಿತು' ಎಂದು ಅವರುದಿಮಿರರ್‌ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಬಾಗಿಲಿನಲ್ಲಿ ತನ್ನ ಪ್ರತಿಬಿಂಬವನ್ನುಕಂಡು ಅದರೊಂದಿಗೆಪೈಪೋಟಿಗೆ ಇಳಿದಿರಬಹುದುಎಂದುರೇನರ್‌ ಅಭಿಪ್ರಾಯ ಪಟ್ಟಿದ್ದಾರೆ.

ಈ ಘಟನೆಯ ಬಗ್ಗೆ ರೇನರ್‌ದಂಪತಿಪೋಲಿಸರಿಗೆದೂರು ದಾಖಲಿಸಿದ್ದು, ಈ ಅಸ್ವಾಭಾವಿಕ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು,ಕೆಲ ಸಮಯಬಳಿಕ ಸ್ಥಳೀಯ ರೈತನೊಬ್ಬಟಗರುತನ್ನದೆಂದು ಹೇಳಿದ್ದಾನೆ.

‘ಟಗರುಗಾಜಿನ ಬಾಗಿಲನ್ನು ಧ್ವಂಸಗೊಳಿಸಿದ್ದನ್ನು ವಿಮಾ ಕಂಪನಿಗೆ ಕರೆಮಾಡಿ ವಿವರಿಸಲಾಗಿದ್ದು ಅವರು ಮೇಲ್ನೋಟಕ್ಕೆಇದೊಂದು ಅಸ್ವಾಭಾವಿಕ ಘಟನೆಯಂತೆ ತೋರುತ್ತಿದೆ'ಎಂದು ಪ್ರತಿಕ್ರಿಯಿಸಿದ್ದು,ಪರಿಹಾರನೀಡಲುಒಪ್ಪಿಗೆ ಸೂಚಿಸಿದ್ದಾರೆಎಂದುರೇನರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.