ADVERTISEMENT

ಯುಎಇನಲ್ಲಿ ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 18:12 IST
Last Updated 17 ಅಕ್ಟೋಬರ್ 2019, 18:12 IST
   

ದುಬೈ: ವಿಶ್ವದ ಮೊದಲ ‘ಕೃತಕ ಬುದ್ದಿಮತ್ತೆ ವಿಶ್ವವಿದ್ಯಾಲಯ’ವನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್ ಆರಂಭಿಸುತ್ತಿದ್ದು, 2020ರ ಸೆಪ್ಟೆಂಬರ್ 20ರಂದು ಲೋಕಾರ್ಪಣೆಗೊಳ್ಳಲಿದೆ.

ವಿಶ್ವವಿದ್ಯಾಲಯಕ್ಕೆ ‘ಮೊಹಮ್ಮದ್‌ ಬಿನ್‌ ಜಾಯೀದ್‌ ಯೂನಿರ್ವಸಿಟಿ ಆಫ್‌ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌’ (ಎಂಬಿಝಡ್‌ಯುಎಐ) ಎಂದು ಹೆಸರಿಡಲಾಗಿದೆ.

ಸಚಿವ ಸುಲ್ತಾನ್‌ ಅಹ್ಮದ್‌ಅಲ್‌ ಜಬೇರ್‌ ಅವರನ್ನು ವಿಶ್ವವಿದ್ಯಾಲಯ ಸಮಿತಿಯಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದ್ದು, ಪದವಿ ತರಗತಿಗಳ ಪ್ರವೇಶಾವಕಾಶ ಪ್ರಕ್ರಿಯೆಯನ್ನು ಗುರುವಾರ ಆರಂಭಿಸಲಾಯಿತು.

ADVERTISEMENT

ಮೊದಲ ವರ್ಷದ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌.ಡಿ ಪದವಿ ಪ್ರವೇಶ ಪ್ರಕ್ರಿಯೆಯನ್ನು ಇದೇ ತಿಂಗಳು
ಆರಂಭಿಸಲಾಗುತ್ತಿದೆ. ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ, ಆರೋಗ್ಯ ವಿಮೆ, ವಸತಿ ಸೌಲಭ್ಯ ಮತ್ತು ತಿಂಗಳ ಭತ್ಯೆಯನ್ನು ನೀಡಲಾಗುವುದು ಎಂದು ವಿಶ್ವವಿದ್ಯಾಲಯದ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.