ADVERTISEMENT

ಟರ್ಕಿ: ಬಸ್‌ ಅಪಘಾತದಲ್ಲಿ ಕನಿಷ್ಠ 12 ಮಂದಿ ಸಾವು

ರಾಯಿಟರ್ಸ್
Published 11 ಜುಲೈ 2021, 9:37 IST
Last Updated 11 ಜುಲೈ 2021, 9:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಂಕಾರಾ: ಪೂರ್ವ ಟರ್ಕಿಯಲ್ಲಿ ಅಫ್ಗನ್‌, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಲಸಿಗರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಭಾನುವಾರ ಅಪಘಾತಕ್ಕೀಡಾಗಿದ್ದು, ಕನಿಷ್ಠ 12 ಮಂದಿ ಮೃತಪಟ್ಟಿದ್ದು, 26 ಮಂದಿಗೆ ಗಾಯಗೊಂಡಿದ್ದಾರೆ.

‘ಇರಾನ್‌ನೊಂದಿಗಿನ ಟರ್ಕಿಯ ಗಡಿಯ ಬಳಿಯಿರುವ ಮುರ್ದಿಯಾ ಜಿಲ್ಲೆಯ ವಾನ್‌ ಪ್ರಾಂತ್ಯದಲ್ಲಿ ಬಸ್‌ ಕಮರಿಗೆ ಬಿದ್ದು ಬೆಂಕಿ ಹತ್ತಿಕೊಂಡಿತು’ ಎಂದು ಸ್ಥಳೀಯ ಮೂಲಗಳು ಹೇಳಿವೆ.

ಇರಾನ್‌, ಅಫ್ಗಾನಿಸ್ತಾನ, ಪಾಕಿಸ್ತಾನದಿಂದ ಯೂರೋಪ್‌ನತ್ತ ತೆರಳುವ ವಲಸಿಗರಿಗೆ ಟರ್ಕಿಯು ಪ್ರಮುಖ ಮಧ್ಯವರ್ತಿ ದೇಶದಂತೆ ವರ್ತಿಸುತ್ತಿದ್ದು, ವಲಸಿಗರನ್ನು ಸಾಗಿಸುವ ಕೆಲಸ ಮಾಡುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.