
ಸಾವು (ಪ್ರಾತಿನಿಧಿಕ ಚಿತ್ರ)
ರಿಯೊ ಡಿ ಜನೈರೊ: ಬ್ರೆಜಿಲ್‌ನ ಫಾವಿಲಾದಲ್ಲಿನ ಮಾದಕ ವಸ್ತು ಜಾಲದ ಮೇಲೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನೆತ್ತರು ಹರಿದಿದ್ದು, ಕನಿಷ್ಠ 40 ಮೃತದೇಹಗಳು ಪತ್ತೆಯಾಗಿವೆ.
ಈ ಮೃತದೇಹಗಳು ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ಸಾವಿಗೀಡಾದ ಡ್ರಗ್ ಜಾಲದ 60 ಶಂಕಿತ ಸದಸ್ಯರವೇ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಕಾರ್ಯಾಚರಣೆಯಲ್ಲಿ 2,500 ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದು, ಈ ಪೈಕಿ ನಾಲ್ವರು ಮೃತಪಟ್ಟಿದ್ದಾರೆ.
‘ಶೋಧ ಕಾರ್ಯಾಚರಣೆ ವೇಳೆ 60 ಕ್ರಿಮಿನಲ್‌ಗಳನ್ನು ಹತ್ಯೆ ಮಾಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಾರ ಸಂಖ್ಯೆಯ ಪೊಲೀಸ್ ಅಧಿಕಾರಿಗಳು, ಶಸ್ತ್ರಾಸ್ತ್ರಗಳನ್ನು ಒಳಗೊಂಡ ವಾಹನಗಳು, ಹೆಲಿಕಾಪ್ಟರ್, ಡ್ರೋನ್ ಬಳಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
‘ಕಾರ್ಯಾಚರಣೆ ಸಂದರ್ಭದಲ್ಲಿ ಪಾತಕಿಗಳು ಡ್ರೋನ್ ಬಳಸಿ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದರು’ ಎಂದು ರಿಯೊ ಸ್ಟೇಟ್ ಗವರ್ನರ್ ಕ್ಲೌಡಿಯೊ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.