ಮೆಲ್ಬರ್ನ್: ಇರಾನ್‌ನ ರಾಯಭಾರಿಯನ್ನು ದೇಶದಿಂದ ಹೊರಹಾಕಲಾಗುವುದು ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಅಲ್ಬನೀಸ್ ಮಂಗಳವಾರ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಯಹೂದಿಗಳ ಮೇಲೆ ನಡೆದಿರುವ ಕನಿಷ್ಠ ಎರಡು ದಾಳಿಗಳ ಹಿಂದೆ ಇರಾನ್ ಸರ್ಕಾರವಿದೆ ಎಂದು ಗುಪ್ತಚರ ಇಲಾಖೆಯು ಬಹಿರಂಗಪಡಿಸಿದ ನಂತರ ಈ ಕ್ರಮ ತೆಗೆದುಕೊಂಡಿದ್ದಾರೆ.
ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿ ಸಿಡ್ನಿಯಲ್ಲಿರುವ ಕೋಷರ್ ಫುಡ್ ಕಂಪನಿಯ ಲೆವಿಸ್ ಕಾಂಟಿನೆಂಟಲ್ ಕಿಚನ್ ಹಾಗೂ ಡಿಸೆಂಬರ್‌ನಲ್ಲಿ ಮೆಲ್ಬರ್ನ್‌ನಲ್ಲಿರುವ ಅಡ್ಡಾಸ್ ಇಸ್ರೇಲ್ ಸಿನಗಾಗ್ ಮೇಲೆ ನಡೆದ ದಾಳಿಯಲ್ಲಿ ಇರಾನ್ ಸರ್ಕಾರದ ಪಾತ್ರವಿದೆ ಎಂದು ಆಸ್ಟ್ರೇಲಿಯಾದ ಭದ್ರತಾ ಗುಪ್ತಚರ ಸಂಸ್ಥೆಯು ತಿಳಿಸಿದೆ ಎಂದು ಅಲ್ಬನೀಸ್ ಮಾಹಿತಿ ನೀಡಿದ್ದಾರೆ.
ಈ ಘೋಷಣೆಗೂ ಮೊದಲು, ಆಸ್ಟ್ರೇಲಿಯಾದಲ್ಲಿನ ಇರಾನ್ ರಾಯಭಾರಿ ಅಹಮದ್ ಸಾದೇಘಿ ಅವರನ್ನು ದೇಶದಿಂದ ಹೊರಹಾಕಲಾಗುವುದು ಎಂದು ತಿಳಿಸಲಾಗಿತ್ತು. ಇರಾನ್‌ನಲ್ಲಿರುವ ತಮ್ಮ ದೇಶದ ರಾಯಭಾರಿಯನ್ನು ವಾಪಸ್ ಕರೆಸಿಕೊಂಡು ಬೇರೆ ದೇಶಕ್ಕೆ ನಿಯೋಜಿಸಲಾಗಿದೆ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.