ADVERTISEMENT

ಆಸ್ಟ್ರೇಲಿಯಾ ಸಂಸತ್‌ನಲ್ಲಿ ಬಂದೂಕು ನಿಯಂತ್ರಣ ಮಸೂದೆ ಅಂಗೀಕಾರ

ಸಂಸತ್‌ನಲ್ಲಿ ದ್ವೇಷ ಭಾಷಣ ವಿರೋಧಿ ವಿಧೇಯಕ ಚರ್ಚೆ; ನಾಳೆ ಅಂಗೀಕಾರ ಸಾಧ್ಯತೆ

ಏಜೆನ್ಸೀಸ್
Published 20 ಜನವರಿ 2026, 14:14 IST
Last Updated 20 ಜನವರಿ 2026, 14:14 IST
ಸಿಡ್ನಿಯ ಬೋಂಡಿ ಪೆವಿಲಿಯನ್‌ (ಸಂಗ್ರಹ ಚಿತ್ರ)
ಸಿಡ್ನಿಯ ಬೋಂಡಿ ಪೆವಿಲಿಯನ್‌ (ಸಂಗ್ರಹ ಚಿತ್ರ)   

ಮೆಲ್ಬೋರ್ನ್‌: ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಕಳೆದ ತಿಂಗಳು ನಡೆದ ಯಹೂದಿ ಹಬ್ಬದಲ್ಲಿ ಇಬ್ಬರು ಬಂದೂಕುಧಾರಿಗಳು 15 ಜನರನ್ನು ಕೊಂದ ಬೆನ್ನಲ್ಲೇ, ಆಸ್ಟ್ರೇಲಿಯಾದ ಸಂಸತ್‌ ಹೊಸ ಬಂದೂಕು ನಿಯಂತ್ರಣ ಮಸೂದೆಯನ್ನು ಮಂಗಳವಾರ ಅಂಗೀಕರಿಸಿತು. ದ್ವೇಷ ಭಾಷಣ ವಿರೋಧಿ ಕಾನೂನುಗಳ ಕರಡು ಕುರಿತ ಚರ್ಚೆಯನ್ನೂ ಆರಂಭಿಸಿತು. 

ಬಂದೂಕು ನಿಯತ್ರಣ ಕಾನೂನುಗಳು, ಬಂದೂಕು ಮಾಲೀಕತ್ವದ ಮೇಲೆ ಹೊಸ ನಿರ್ಬಂಧಗಳನ್ನು ಹೇರಲಿವೆ. ತಮ್ಮ ಬಂದೂಕುಗಳನ್ನು ಕಡ್ಡಾಯವಾಗಿ ಹಸ್ತಾಂತರಿಸುವ ಜನರಿಗೆ ಪರಿಹಾರ ನೀಡಲು ಮರುಖರೀದಿ ಯೋಜನೆಯನ್ನು ಜಾರಿಗೆ ತರಲಾಗುತ್ತದೆ.

ದ್ವೇಷ ಭಾಷಣ ನಿಯಂತ್ರಣ ಕಾನೂನುಗಳು ಹಿಜ್ಬ್‌ ಉಟ್‌–ತಹ್ರೀರ್‌ನಂತಹ ಸಂಘಟನೆಗಳನ್ನು ಕಾನೂನುಬಾಹಿರ ಎಂದು ಘೋಷಿಸಲು ಅನುವು ಮಾಡಿಕೊಡುತ್ತವೆ. ಈ ಸಂಘಟನೆಯನ್ನು ಕೆಲವು ದೇಶಗಳು ನಿಷೇಧಿಸಿವೆ.

ADVERTISEMENT

ಬಂದೂಕು ನಿಯಂತ್ರಣ ಮತ್ತು ದ್ವೇಷ ಭಾಷಣ ನಿಷೇಧಕ್ಕೆ ಒಂದೇ ಮಸೂದೆಯನ್ನು ಮಂಡಿಸಲು ಸರ್ಕಾರವು ಮೊದಲು ಯೋಜಿಸಿತ್ತು. ನಂತರ ಎರಡು ಪ್ರತ್ಯೇಕ ಮಸೂದೆಗಳಾಗಿ ವಿಂಗಡಿಸಿ ಮಂಗಳವಾರ ಸಂಸತ್‌ನಲ್ಲಿ ಮಂಡಿಸಿದೆ. ಬಂದೂಕು ನಿಯಂತ್ರಣ ಮಸೂದೆಗೆ ಸೆನೆಟ್‌ ಮಂಗಳವಾರ ತಡರಾತ್ರಿ ಅಂಗೀಕಾರ ನೀಡಿದೆ. ದ್ವೇಷ ಭಾಷಣ ನಿಷೇಧ ಮಸೂದೆಗೆ ಬುಧವಾರ ಅಂಗೀಕಾರ ದೊರೆಯುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.