ADVERTISEMENT

ಆಸ್ಟ್ರೇಲಿಯಾ: ಮೆಲ್ಬರ್ನ್‌ನಲ್ಲಿ 111 ದಿನಗಳ ಲಾಕ್‌ಡೌನ್‌ ಅಂತ್ಯ

ಏಜೆನ್ಸೀಸ್
Published 28 ಅಕ್ಟೋಬರ್ 2020, 11:43 IST
Last Updated 28 ಅಕ್ಟೋಬರ್ 2020, 11:43 IST
ಲಾಕ್‌ಡೌನ್‌ ತೆರವಿನ ಬಳಿಕ ಅಂಗಡಿಗೆ ಭೇಟಿ ನೀಡಿದ ಗ್ರಾಹಕರು
ಲಾಕ್‌ಡೌನ್‌ ತೆರವಿನ ಬಳಿಕ ಅಂಗಡಿಗೆ ಭೇಟಿ ನೀಡಿದ ಗ್ರಾಹಕರು   

ಮೆಲ್ಬರ್ನ್: ಆಸ್ಟ್ರೇಲಿಯಾದ ಎರಡನೇ ಅತಿ ದೊಡ್ಡ ನಗರ ಮೆಲ್ಬರ್ನ್‌ನಲ್ಲಿ ವಿಧಿಸಲಾಗಿದ್ದ 111 ದಿನಗಳ ಲಾಕ್‌ಡೌನ್‌ ಅನ್ನು ಬುಧವಾರ ತೆರವುಗೊಳಿಸಲಾಯಿತು.

ನಗರದಲ್ಲಿನ 6,200 ದಿನಸಿ ಅಂಗಡಿಗಳು, 5,800 ಕೆಫೆ ಮತ್ತು ರೆಸ್ಟೋರೆಂಟ್‌ಗಳು, 1,000 ಬ್ಯೂಟಿ ಸಲೂನ್‌ಗಳು ಹಾಗೂ 800 ಪಬ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇವುಗಳ ಮೇಲೆ ನಿರ್ಬಂಧ ವಿಧಿಸಿದ್ದರಿಂದ ಸುಮಾರು 1.80 ಲಕ್ಷ ಮಂದಿಯ ಉದ್ಯೋಗದ ಮೇಲೆ ಪರಿಣಾಮ ಬೀರಿತ್ತು.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಜನರಿಗೆ ತಮ್ಮ ಮನೆಯಿಂದ ಕೇವಲ 25 ಕಿ.ಮೀ ದೂರದವರೆಗೆ ಪ್ರಯಣಿಸಲು ಮಾತ್ರ ಅನುಮತಿ ನೀಡಲಾಗಿದೆ. ಅಲ್ಲದೇ ಮನೆಯಿಂದಲ್ಲೇ ಕೆಲಸ(ವರ್ಕ್‌ ಫ್ರಮ್ ಹೋಮ್‌) ಮಾಡಲು ಅವಕಾಶ ಕಲ್ಪಿಸಿರುವುದರಿಂದ ಬುಧವಾರ ರಸ್ತೆಗಳಲ್ಲಿ ಜನ ಸಂಚಾರ ಬಹಳ ಕಡಿಮೆಯಾಗಿತ್ತು.

ADVERTISEMENT

ಈ ಮೊದಲು ರೆಸ್ಟೋರೆಂಟ್‌ಗಳಿಗೆ ಪಾರ್ಸಲ್‌ ಸೇವೆಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು.

ಸೋಮವಾರದಿಂದ ಯಾವುದೇ ಹೊಸ ಪ್ರಕರಣಗಳು ನಗರದಲ್ಲಿ ವರದಿಯಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.