ADVERTISEMENT

ಆಸ್ಟ್ರೇಲಿಯಾ ಸಂಸತ್‌ ಚುನಾವಣೆ: ಅಂತಿಮ ಫಲಿತಾಂಶ ಘೋಷಣೆ

ಏಜೆನ್ಸೀಸ್
Published 22 ಜೂನ್ 2022, 11:07 IST
Last Updated 22 ಜೂನ್ 2022, 11:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕ್ಯಾನ್‌ಬೆರಾ: ಆಸ್ಟ್ರೇಲಿಯಾ ಸಂಸತ್‌ನ ಕೆಳಮನೆಗೆ ಮೇ 21ರಂದು ನಡೆದಿದ್ದ ಚುನಾವಣೆಯ ಅಂತಿಮ ಫಲಿತಾಂಶವನ್ನು ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದ್ದು, ವಿಕ್ಟೋರಿಯಾ ರಾಜ್ಯದ ಕೂಪರ್‌ ಕ್ಷೇತ್ರ ಲೇಬರ್‌ ಪಕ್ಷದ ಪಾಲಾಗಿದೆ.

ಆಸ್ಟ್ರೇಲಿಯಾದ ಕೆಳಮನೆ (ಹೌಸ್‌ ಆಫ್‌ ರೆಪ್ರಸೆಂಟೇಟಿವ್ಸ್‌) ಸದಸ್ಯ ಬಲ 151. ಈ ಪೈಕಿ, ಬುಧವಾರ ಪ್ರಕಟವಾಗಿರುವ ಫಲಿತಾಂಶದಂತೆ ವಿಕ್ಟೋರಿಯಾ ರಾಜ್ಯದ ಸ್ಥಾನವನ್ನು ಗೆದ್ದ ಲೇಬರ್‌ ಪಕ್ಷದ ಸಂಖ್ಯಾ ಬಲ 77ಕ್ಕೇರಿದಂತಾಗಿದೆ.

ಇದರೊಂದಿಗೆ, ಕೆಳಮನೆಯಲ್ಲಿ ಆಡಳಿತಾರೂಢ ಲೇಬರ್‌ ಪಕ್ಷಕ್ಕೆ ಸರಳ ಬಹುಮತ ದೊರತಂತಾಗಿದೆ. ಆದರೆ, ಸೆನೆಟ್‌ನಲ್ಲಿ ಈ ಸ್ಥಿತಿ ಇಲ್ಲ. ಸೆನೆಟ್‌ನ ಒಟ್ಟು 76 ಸ್ಥಾನಗಳ ಪೈಕಿ ಲೇಬರ್‌ ಪಕ್ಷದ ಸ್ಥಾನಗಳ ಸಂಖ್ಯೆ 26 ಮಾತ್ರ. ಹೀಗಾಗಿ, ಸೆನೆಟ್‌ನಲ್ಲಿ ಮಸೂದೆಯೊಂದು ಅಂಗೀಕಾರವಾಗಬೇಕಾದರೆ, ಲೇಬರ್‌ ಪಕ್ಷ ನೇತೃತ್ವದ ಸರ್ಕಾರಕ್ಕೆ ಸಣ್ಣ ಪಕ್ಷಗಳ ಬೆಂಬಲ ಅನಿವಾರ್ಯವಾಗಲಿದೆ.

ADVERTISEMENT

ಪಶ್ಚಿಮ ಭಾಗದ ರಾಜ್ಯದ ಓಕಾನರ್‌ ಕ್ಷೇತ್ರ ವಿರೋಧ ಪಕ್ಷವಾದ ಲಿಬರಲ್‌ ಪಾರ್ಟಿ ಪಾಲಾಗಿದೆ ಎಂದು ಆಯೋಗ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.