ADVERTISEMENT

ಆಸ್ಟ್ರಿಯಾ: ಐಎಸ್‌ ನಂಟಿನ ಉಗ್ರ ಜಾಲ ಪತ್ತೆ 

ಎಪಿ
Published 5 ಸೆಪ್ಟೆಂಬರ್ 2023, 14:32 IST
Last Updated 5 ಸೆಪ್ಟೆಂಬರ್ 2023, 14:32 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬರ್ಲಿನ್‌: ಇಸ್ಲಾಮಿಕ್ ಸ್ಟೇಟ್ (ಐಎಸ್‌)ನೊಂದಿಗೆ ನಂಟು ಹೊಂದಿರುವ, ಒಂಬತ್ತು ಯುವಕರು ಮತ್ತು ಒಬ್ಬ ಮಹಿಳೆಯನ್ನು ಒಳಗೊಂಡ ಭಯೋತ್ಪಾದಕ ಜಾಲವನ್ನು ಆಸ್ಟ್ರಿಯಾದ ಭದ್ರತಾ ಅಧಿಕಾರಿಗಳು ಮಂಗಳವಾರ ಬೇಧಿಸಿದ್ದಾರೆ. ಒಬ್ಬ ಶಂಕಿತನನ್ನು ಬಂಧಿಸಲಾಗಿದ್ದು, ಇತರರನ್ನು ವಿಚಾರಣೆಗೆ ಒಳಪಡಿಸಲಾಗಿದೆ. 

ಶಂಕಿತರು ಮೂಲಭೂತವಾದಿ, ಭಯೋತ್ಪಾದಕ ನಡವಳಿಕೆಗಳನ್ನು ಹೊಂದಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಆಸ್ಟ್ರಿಯಾದ ಗುಪ್ತಚರ ಸೇವೆ ಡಿಎಸ್ಎನ್ ತಿಳಿಸಿದೆ. ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿಯೂ ಅದು ಹೇಳಿದೆ. ಆದರೆ, ಶಂಕಿತರ ಕುರಿತ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. 

ADVERTISEMENT

‘ಶಂಕಿತ ಉಗ್ರರು 15 ರಿಂದ 23 ವರ್ಷ ವಯಸ್ಸಿನವರಾಗಿದ್ದು, ಉತ್ತರ ಆಸ್ಟ್ರಿಯಾದ ಲಿಂಜ್ ನಗರದ ಬಳಿ ನೆಲೆಸಿದ್ದರು. ಐಎಸ್ ಮತ್ತು ಅದರ ಅಪರಾಧ ಚಟುವಟಿಕೆಗಳಿಗೆ ದೀರ್ಘಕಾಲದಿಂದಲೂ ನೇಮಕಾತಿಗಳನ್ನು ನಡೆಸುತ್ತಿದ್ದರು. ಮಸೀದಿ ಅಥವಾ ಪ್ರಾರ್ಥನಾ ಕೊಠಡಿ ಸ್ಥಾಪಿಸಲು ಯೋಜಿಸಿದ್ದರು’ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

ಆಸ್ಟ್ರಿಯಾದ ಗೌಪ್ಯತೆ ನಿಯಮಗಳ ಪ್ರಕಾರ ಶಂಕಿತರ ಗುರುತನ್ನು ಬಹಿರಂಗಪಡಿಸುವಂತಿಲ್ಲ. ಹೀಗಾಗಿ ಅಧಿಕಾರಿಗಳು ಯಾವುದೇ ವಿವರ ನೀಡಿಲ್ಲ. ಆದರೆ, ಅವರು ಆಸ್ಟ್ರಿಯಾ, ಟರ್ಕಿ, ಇರಾಕ್, ರಷ್ಯಾ ಮತ್ತು ಕ್ರೊವೇಷಿಯಾದಿಂದ ಬಂದವರಾಗಿದ್ದಾರೆ ಎಂದು ಆಸ್ಟ್ರಿಯಾದ ಸುದ್ದಿ ಸಂಸ್ಥೆ ಎಪಿಎ ವರದಿ ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.