ADVERTISEMENT

ರಾಹುಲ್‌ಗೆ ಜೈಲು ಶಿಕ್ಷೆ | ವಿಶ್ವಸಂಸ್ಥೆ ಗಮನಕ್ಕೆ ಬಂದಿದೆ: ಗುಟೆರಸ್ ವಕ್ತಾರ

ಪಿಟಿಐ
Published 24 ಮಾರ್ಚ್ 2023, 12:45 IST
Last Updated 24 ಮಾರ್ಚ್ 2023, 12:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿರುವುದರ ಕುರಿತ ವರದಿಗಳು ಗಮನಕ್ಕೆ ಬಂದಿದೆ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರ ವಕ್ತಾರ ಫರ್ಹಾನ್ ಹಕ್ ಗುರುವಾರ ತಿಳಿಸಿದ್ದಾರೆ.

‘ಭಾರತದ ಪ್ರಜಾಪ್ರಭುತ್ವದ ಬಗ್ಗೆ ಗುಟೆರಸ್‌ ಅವರು ಚಿಂತಿತರಾಗಿದ್ದಾರೆಯೇ’ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಹುಲ್‌ ಅವರ ಪಕ್ಷವು ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ನಾವು ಇಷ್ಟೇ ಹೇಳಲು ಬಯಸುತ್ತೇವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT