ADVERTISEMENT

ಬಾಗ್ದಾದ್‌: ಅಮೆರಿಕದ ರಾಯಭಾರ ಕಚೇರಿಯ ವಲಯದಲ್ಲಿ ಕ್ಷಿಪಣಿ ದಾಳಿ

ಏಜೆನ್ಸೀಸ್
Published 5 ಜುಲೈ 2020, 15:05 IST
Last Updated 5 ಜುಲೈ 2020, 15:05 IST
ಬಾಗ್ದಾದ್‌ನ ಹಸಿರುವಲಯದಲ್ಲಿರುವ ಅಮೆರಿಕದ ರಾಯಭಾರ ಕಚೇರಿ
ಬಾಗ್ದಾದ್‌ನ ಹಸಿರುವಲಯದಲ್ಲಿರುವ ಅಮೆರಿಕದ ರಾಯಭಾರ ಕಚೇರಿ   

ಬಾಗ್ದಾದ್‌: ಬಾಗ್ದಾದ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಇರುವ ಹಸಿರು ವಲಯದಲ್ಲಿ ಕ್ಷಿಪಣಿ (ರಾಕೆಟ್‌)‌ ದಾಳಿ ನಡೆದಿದೆ. ಈ ಕ್ಷಿಪಣಿ‌ ಮನೆಯೊಂದಕ್ಕೆ ಬಡಿದು, ಮಗು ಗಾಯಗೊಂಡಿದೆ ಎಂದು ಇರಾಕ್‌ನ ಸೇನೆ ಭಾನುವಾರ ತಿಳಿಸಿದೆ.

ರಾಯಭಾರ ಕಚೇರಿಯಲ್ಲಿ ಈಚೆಗೆ ಅಳವಡಿಸಲಾದ ಸಿ–ರ್‍ಯಾಮ್‌ ವಾಯುರಕ್ಷಣಾ ವ್ಯವಸ್ಥೆಯು ಈ ‌ದಾಳಿಯನ್ನು ತಡೆದಿರಬಹುದು. ಇತ್ತೀಚಿನ ಕ್ಷಿಪಣಿ ದಾಳಿಗಳು ಅಮೆರಿಕ ರಾಯಭಾರ ಕಚೇರಿಗೆ ಹತ್ತಿರವಾಗಿದ್ದು, ಅಮೆರಿಕ ಸೈನಿಕರನ್ನು ಗುರಿಯಾಗಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.

ಅಲಿ ಆಲ್‌ ಸಲೇಹ್‌ ಪ್ರದೇಶದಿಂದ ಈ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದ್ದು, ಸ್ಥಳೀಯ ಸುದ್ದಿವಾಹಿನಿಯ ಕಚೇರಿ ಪಕ್ಕದಲ್ಲಿದ್ದ ಮನೆಗೆ ಬಡಿದಿದೆ. ಇದರಿಂದಾಗಿ ಮನೆಗೆ ಹಾನಿಯಾಗಿದ್ದು, ಮನೆಯಲ್ಲಿದ್ದಮಗುವಿಗೆ ಪೆಟ್ಟಾಗಿದೆ.

ADVERTISEMENT

ಅಮೆರಿಕ ಸೇನೆಯ ತರಬೇತಿ ನೆಲೆಯಾದ ಉತ್ತರ ಬಾಗ್ದಾದ್‌ನ ಉಮ್‌ ಅಲ್‌ ಅಜಂ ಪ್ರದೇಶದ ಮೇಲೆಯೂ ಸಂಭವಿಸಲಿದ್ದಕ್ಷಿಪಣಿ ದಾಳಿಯನ್ನು ತಡೆಯಲಾಗಿದೆ ಎಂದು ಇರಾನಿನ ಭದ್ರತಾ ಪಡೆಗಳು ಹೇಳಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.