ADVERTISEMENT

ಪಾಕಿಸ್ತಾನ ರೈಲನ್ನು 'ಬಲೂಚಿ' ಬಂಡುಕೋರರು ಹೈಜಾಕ್ ಮಾಡಿದ್ದು ಹೇಗೆ? ವಿಡಿಯೊ ನೋಡಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 13:32 IST
Last Updated 12 ಮಾರ್ಚ್ 2025, 13:32 IST
<div class="paragraphs"><p>ಪಾಕಿಸ್ತಾನ ರೈಲನ್ನು 'ಬಲೂಚಿ' ಬಂಡುಕೋರರು ಹೈಜಾಕ್ ಮಾಡಿದ್ದು </p></div>

ಪಾಕಿಸ್ತಾನ ರೈಲನ್ನು 'ಬಲೂಚಿ' ಬಂಡುಕೋರರು ಹೈಜಾಕ್ ಮಾಡಿದ್ದು

   

ರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ರೈಲಿನ ಮೇಲೆ ದಾಳಿ ನಡೆಸುವ ಮೂಲಕ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ–) ಅಥವಾ ಬಲೂಚಿ ಬಂಡುಕೋರರು ಸುಮಾರು 400 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.

ಮಂಗಳವಾರ ಮಧ್ಯಾಹ್ನ ಕ್ವೆಟ್ಟಾದಿಂದ ಪೆಶಾವರಕ್ಕೆ ತೆರಳುತ್ತಿದ್ದ ಒಂಬತ್ತು ಬೋಗಿಗಳಿರುವ ಜಾಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸುಮಾರು 400 ಜನ ಪ್ರಯಾಣಿಸುತ್ತಿದ್ದರು. ಗಡಾಲರ್ ಕಣಿವೆ ಪ್ರದೇಶದ ಸಮೀಪದಲ್ಲಿ ಬಿಎಲ್ಎ ಉಗ್ರರು ರೈಲ್ವೆ ಹಳಿಯನ್ನು ಹೇಗೆ ಸ್ಫೋಟಿಸಿದರು? ಹಾಗೂ ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡ ಬಗೆಯ ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ. 

ADVERTISEMENT

ಪತ್ರಕರ್ತ ಗೌರವ್‌ ಸಾವಂತ್‌ ಎಂಬುವರ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೊದ ಆರಂಭದಲ್ಲಿ ಬಿಎಲ್‌ಎ ಲೊಗೊ ಹಾಗೂ ಹಕ್ಕಲ್‌ ಮೀಡಿಯಾ ಪ್ರಸ್ತುತಿ ಎಂದು ತೋರಿಸಲಾಗುತ್ತದೆ. ನಂತರ ಹಳಿ ಸ್ಫೋಟ ಮಾಡಿದ್ದು, ಪ್ರಯಾಣಿಕರ ಜೊತೆ ಬಿಎಲ್‌ಎ ಬಂಡುಕೋರರು ಇರುವುದನ್ನು ತೋರಿಸಲಾಗುತ್ತದೆ.

ವಿಡಿಯೊವನ್ನು ಬಿಎಲ್‌ಎ ಬಂಡುಕೋರರು ನಿರ್ಮಿಸಿದ್ದಾರೆ ಎಂದು ಬಿಬಿಸಿ ಮಾಧ್ಯಮ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.