ADVERTISEMENT

ಸುಗ್ರೀವಾಜ್ಞೆ ಅವಧಿ ಅಂತ್ಯ: ಜೆಯುಡಿ ನಿಷೇಧ ಪಟ್ಟಿಯಿಂದ ಹೊರಕ್ಕೆ

ಪಿಟಿಐ
Published 26 ಅಕ್ಟೋಬರ್ 2018, 17:07 IST
Last Updated 26 ಅಕ್ಟೋಬರ್ 2018, 17:07 IST
ಹಫೀಜ್‌ ಸಯೀದ್‌
ಹಫೀಜ್‌ ಸಯೀದ್‌   

ಇಸ್ಲಾಮಾಬಾದ್‌: ಮುಂಬೈ ದಾಳಿಯ ಸೂತ್ರಧಾರಿ, ಹಫೀಜ್‌ ಸಯೀದ್‌ ನೇತೃತ್ವದ ಜಮಾತ್‌–ಉದ್‌–ದಾವಾ (ಜೆಯುಡಿ) ಹಾಗೂ ಫಲ್ಹಾ–ಇ–ಇನ್ಸಾನಿಯತ್ ಫೌಂಡೇಷನ್‌ (ಎಫ್‌ಐಎಫ್‌) ಈಗ ನಿಷೇಧಿತ ಸಂಘಟನೆಗಳ ಪಟ್ಟಿಯಿಂದ ಹೊರಬಂದಿವೆ.

ವಿಶ್ವಸಂಸ್ಥೆಯಲ್ಲಿ ಕೈಗೊಂಡಿದ್ದ ನಿರ್ಣಯದಂತೆ ಈ ಉಭಯ ಸಂಘಟನೆಗಳನ್ನು ನಿಷೇಧಿಸಿ ಕಳೆದ ಫೆಬ್ರುವರಿಯಲ್ಲಿ ಪಾಕಿಸ್ತಾನದ ಅಧ್ಯಕ್ಷ ಮಮ್ನೂನ್‌ ಹುಸೇನ್‌ ಹೊರಡಿಸಿದ್ದ ಸುಗ್ರೀವಾಜ್ಞೆಯ ಅವಧಿ ಮುಕ್ತಾಯಗೊಂಡಿರುವುದೇ ಇದಕ್ಕೆ ಕಾರಣ.

‘ರಾಷ್ಟ್ರಪತಿ ಹೊರಡಿಸಿದ್ದ ಸುಗ್ರೀವಾಜ್ಞೆ ಅವಧಿ ಮುಗಿದಿದೆ ಮತ್ತು ಈ ಅವಧಿಯನ್ನು ಸಹ ವಿಸ್ತರಿಸಿಲ್ಲ’ ಎಂಬ ವಿಷಯವನ್ನು ಇಲ್ಲಿನ ಹೈಕೋರ್ಟ್‌ನಲ್ಲಿ ಗುರುವಾರ ನಡೆದ ವಿಚಾರಣೆ ಸಂದರ್ಭದಲ್ಲಿ ಹಫೀಜ್‌ ಸಯೀದ್‌ ಪರ ವಕೀಲರಾದ ರಾಜಾ ರಿಜ್ವಾನ್‌ ಅಬ್ಬಾಸಿ ಹಾಗೂ ಸೊಹೇಲ್‌ ವರೈಚ್‌ ನ್ಯಾಯಮೂರ್ತಿಗಳ ಗಮನಕ್ಕೆ ತಂದರು’ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ADVERTISEMENT

ಸುಗ್ರೀವಾಜ್ಞೆ ಅವಧಿ ಮುಕ್ತಾಯವಾಗಿರುವುದನ್ನು ಡೆಪ್ಯುಟಿ ಅಟಾರ್ನಿ ಜನರಲ್‌ ರಾಜಾ ಖಾಲಿದ್‌ ದೃಢಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.