ಬಾಂಗ್ಲಾದೇಶದಲ್ಲಿ ನಡೆದ ಪತ್ರಿಭಟನೆಯಲ್ಲಿ ವ್ಯಕ್ತಿಯೊಬ್ಬ ಬಾಂಗ್ಲಾ ಧ್ವಜ ಹಿಡಿದಿರುವುದು
ರಾಯಿಟರ್ಸ್ ಚಿತ್ರ
ಢಾಕಾ: ‘ಬಾಂಗ್ಲಾದೇಶವು ಕ್ರಮೇಣ ಸಾಮಾನ್ಯ ಪರಿಸ್ಥಿತಿಗೆ ಮರಳುತ್ತಿದೆ. ಆದರೆ, ಕೆಲವು ಸವಾಲುಗಳು ಎದುರಲ್ಲಿವೆ’ ಎಂದು ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರ ಮಾಧ್ಯಮ ಕಾರ್ಯದರ್ಶಿ ಶಿಫಿಕ್ ಆಲಂ ಬುಧವಾರ ಹೇಳಿದರು.
ಪರಿಸ್ಥಿತಿಯು ಯಥಾಸ್ಥಿತಿಗೆ ಮರಳಿದ ನಂತರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲಾಗುವುದು ಎಂದರು.
ಬ್ರಿಟನ್ ಹೈಕಮಿಷನರ್, ಬಾಂಗ್ಲಾದಲ್ಲಿನ ಜಪಾನ್ ರಾಯಭಾರಿ ಇಬ್ಬರೂ ಮುಖ್ಯ ಸಲಹೆಗಾರರನ್ನು ಭೇಟಿ ಮಾಡಿದ್ದು, ದೇಶವನ್ನು ಮರಳಿ ಕಟ್ಟಲು ಬೇಕಾದ ಸಹಕಾರ ನೀಡುವುದಾಗಿ ಸೂಚಿಸಿದ್ದಾರೆ ಎಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.