ADVERTISEMENT

ಭಾರತದ ತಪ್ಪಾದ ಭೂಪಟ ಬಳಕೆ: ಕ್ಷಮೆ ಯಾಚಿಸಿದ ಬಿಬಿಸಿ

ಪಿಟಿಐ
Published 19 ಜನವರಿ 2021, 19:50 IST
Last Updated 19 ಜನವರಿ 2021, 19:50 IST

ಲಂಡನ್‌: ಜಮ್ಮು ಮತ್ತು ಕಾಶ್ಮೀರದ ಗಡಿಗಳನ್ನು ಹೊಂದಿರದ ಭಾರತದ ಭೂಪಟವನ್ನು ಪ್ರಕಟಿಸಿದ್ದಕ್ಕಾಗಿ ಸುದ್ದಿಸಂಸ್ಥೆ ಬಿಬಿಸಿ ಮಂಗಳವಾರ ಕ್ಷಮೆ ಯಾಚಿಸಿದೆ. ಭಾರತಕ್ಕೆ ಸಂಬಂಧಿಸಿದ ತಪ್ಪಾದ ಭೂಪಟವನ್ನು ಬಳಸಿರುವುದು ಪ್ರಮಾದ. ಈ ಪ್ರಮಾದವನ್ನು ಸರಿಪಡಿಸಲಾಗಿದೆ ಎಂದೂ ಹೇಳಿದೆ.

ತಪ್ಪಾದ ಭೂಪಟವನ್ನು ಪ್ರಕಟಿಸಿದ್ದನ್ನು ಆಕ್ಷೇಪಿಸಿ, ಲೇಬರ್‌ ಪಾರ್ಟಿ ಸಂಸದ ವೀರೇಂದ್ರ ಶರ್ಮಾ ಅವರು ದೂರು ನೀಡಿದ್ದರು.

ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಅವರಿಂದ ಜಗತ್ತಿನ ಇತರ ರಾಷ್ಟ್ರಗಳು ಏನನ್ನು ನಿರೀಕ್ಷಿಸುತ್ತವೆ ಎಂಬ ಕಾರ್ಯಕ್ರಮ ಇತ್ತೀಚೆಗೆ ಬಿಬಿಸಿಯಲ್ಲಿ ಪ್ರಸಾರವಾಗಿತ್ತು. ಈ ಕಾರ್ಯಕ್ರಮದಲ್ಲಿ ಬಳಸಿದ್ದ ಭಾರತದ ಭೂಪಟದಲ್ಲಿ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಗಡಿಗಳು ಇರಲಿಲ್ಲ. ಈ ಕೇಂದ್ರಾಡಳಿತ ಪ್ರದೇಶಗಳಿರುವ ಭಾಗವನ್ನು ಕೆಂಪು ಬಣ್ಣದಿಂದ ತೋರಿಸಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.