ADVERTISEMENT

ಚೀನೀ ಕಂಪನಿಗಳ ಮೇಲೆ ರಫ್ತು ನಿಯಂತ್ರಣ: ಅಮೆರಿಕ ವಿರುದ್ಧ ಕಿಡಿಕಾರಿದ ಚೀನಾ

ಪಿಟಿಐ
Published 20 ಡಿಸೆಂಬರ್ 2020, 8:49 IST
Last Updated 20 ಡಿಸೆಂಬರ್ 2020, 8:49 IST
ಚೀನಾದ ಅತಿದೊಡ್ಡ ಚಿಪ್‌ಮೇಕರ್ ಸಂಸ್ಥೆ ಎಸ್‌ಎಂಐಸಿ
ಚೀನಾದ ಅತಿದೊಡ್ಡ ಚಿಪ್‌ಮೇಕರ್ ಸಂಸ್ಥೆ ಎಸ್‌ಎಂಐಸಿ   

ಬೀಜಿಂಗ್: ಚೀನಾದ ಸೈನ್ಯದೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇರೆಗೆ ಅಮೆರಿಕ ಡಜನ್‌ಗಟ್ಟಲೆ ಚೀನೀಕಂಪನಿಗಳ ಮೇಲೆ ರಫ್ತು ನಿಯಂತ್ರಣವನ್ನು ಘೋಷಿಸಿದ ನಂತರ ಇದು ಅಮೆರಿಕದ 'ಬೆದರಿಸುವಿಕೆ' ತಂತ್ರ ಎಂದು ಚೀನಾ ದೂರಿದೆ.

ಅಮೆರಿಕ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ಮೊದಲು ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಮತ್ತೊಂದು ಹೊಡೆತ ನೀಡಿದ್ದಾರೆ.

ಅಮೆರಿಕದ ಈ ಕ್ರಮದಿಂದಾಗಿ ದೇಶದ ಅತಿದೊಡ್ಡ ಚಿಪ್‌ಮೇಕರ್ ಎಸ್‌ಎಂಐಸಿ ಮೇಲೆ ಪರಿಣಾಮ ಬೀರುತ್ತದೆ. ಈ ಕ್ರಮವನ್ನು ತೀವ್ರವಾಗಿ ವಿರೋಧಿಸುತ್ತದೆ ಮತ್ತು ಚೀನಾದ ಕಂಪನಿಗಳ ಹಕ್ಕುಗಳನ್ನು ರಕ್ಷಿಸಲು 'ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು' ಪ್ರತಿಜ್ಞೆ ಮಾಡುವುದಾಗಿ ಚೀನಾದ ವಾಣಿಜ್ಯ ಸಚಿವಾಲಯ ಶನಿವಾರ ತಿಳಿಸಿದೆ.

ADVERTISEMENT

ಅಮೆರಿಕವು 'ವಿದೇಶಿ ಘಟಕಗಳನ್ನು ನಿರಂತರವಾಗಿ ನಿಗ್ರಹಿಸಲೆಂದೇ ರಫ್ತು ನಿಯಂತ್ರಣ ಕ್ರಮಗಳು ಮತ್ತು ಇತರ ಕ್ರಮಗಳನ್ನು ದುರುಪಯೋಗಪಡಿಸಿಕೊಂಡಿದೆ' ಎಂದು ಆರೋಪಿಸಿರುವ ಚೀನಾದ ವಾಣಿಜ್ಯ ಸಚಿವಾಲಯವು, ಅಮೆರಿಕವು 'ಏಕಪಕ್ಷೀಯತೆ ಮತ್ತು ಬೆದರಿಸುವಿಕೆಯನ್ನು ನಿಲ್ಲಿಸುವಂತೆ' ಒತ್ತಾಯಿಸಿಸಿದೆ.

ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಶುಕ್ರವಾರ ಮಾತನಾಡಿ, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಸೈನ್ಯವು ಅಮೆರಿಕ ಕಂಪನಿಗಳ ವ್ಯವಹಾರ ಸಾಮರ್ಥ್ಯದ ಮೇಲೆ ನಿರ್ಬಂಧ ವಿಧಿಸುತ್ತಿರುವುದು ಮತ್ತು ಅಮೆರಿಕದ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಸೈನ್ಯವನ್ನು ಬಲಪಡಿಸಿಕೊಳ್ಳುತ್ತಿದೆ. ಇದು ಮಾನವ ಹಕ್ಕುಗಳ ಮೇಲಿನ ಉಲ್ಲಂಘನೆಯಾಗಿದೆ. ಹೀಗಾಗಿ ಚೀನಾ ಸೈನ್ಯದೊಂದಿಗೆ ಸಂಪರ್ಕ ಹೊಂದಿರುವ ಚೀನಾ ಕಂಪನಿಗಳಿಗೆ ರಫ್ತು ನಿಯಂತ್ರಣ ವಿಧಿಸಲಾಗಿದೆ.ಚೀನಾದ ಸೈನ್ಯದೊಂದಿಗೆ ಸಂಪರ್ಕ ಹೊಂದಿರುವ ಪ್ರತಿಯೊಂದು ಕಂಪನಿಯ ವಿರುದ್ಧವೂ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ‌.

ಎಸ್‌ಎಂಐಸಿ ಬೀಜಿಂಗ್‌ನಿಂದ ಶತಕೋಟಿ ಡಾಲರ್‌ಗಳಷ್ಟುಸಹಕಾರ ಪಡೆದಿದೆ ಮತ್ತು ದೇಶದ ತಾಂತ್ರಿಕ ಸ್ವಾವಲಂಬನೆಯನ್ನು ಸುಧಾರಿಸುವ ಪ್ರಯತ್ನಗಳ ಮುಖ್ಯ ಭಾಗವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.