ಹೃತಿಕ್ ರೆಡ್ಡಿ
ಎಕ್ಸ್ ಚಿತ್ರ
ಬರ್ಲಿನ್: ಜರ್ಮನಿಯ ಬರ್ಲಿನ್‌ನ ವಸತಿ ಸಮುಚ್ಚಯದಲ್ಲಿ ಕಳೆದ ಬುಧವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತೆಲಂಗಾಣ ಮೂಲದ ವಿದ್ಯಾರ್ಥಿ ಹೃತಿಕ್ ರೆಡ್ಡಿ (35) ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ವಸತಿ ಸಮುಚ್ಚಯದ ಮೇಲ್ಮಹಡಿಯಲ್ಲಿ ಹೃತಿಕ್ ವಾಸವಿದ್ದರು. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಆವರಿಸಿದ ಹೊಗೆಯಿಂದ ಗಾಬರಿಗೊಂಡ ಇವರು, ಪಾರಾಗಲು ಕೆಳಕ್ಕೆ ಹಾರಿದರು. ಇದರಿಂದ ಅವರ ತಲೆಗೆ ತೀವ್ರವಾಗಿ ಪೆಟ್ಟಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ವಾಗ್ದೇವಿ ಎಂಜಿನಿಯರಿಂಗ್ ಕಾಲೇಜಿನಿಂದ 2022ರಲ್ಲಿ ಪದವಿ ಪಡೆದ ಇವರು, 2023ರಲ್ಲಿ ಎಂಎಸ್ ಕೋರ್ಸ್‌ಗೆ ಜರ್ಮನಿಯಲ್ಲಿ ದಾಖಲಾಗಿದ್ದರು.
ತೆಲಂಗಾಣದ ಮಲ್ಕಾಪುರ ಗ್ರಾಮದವರಾದ ಹೃತ್ವಿಕ್ ಅವರು ಈ ಸಂಕ್ರಾಂತಿಗೆ ಭಾರತಕ್ಕೆ ಬರಲು ಸಿದ್ಧತೆ ನಡೆಸಿದ್ದರು ಎಂದೆನ್ನಲಾಗಿದೆ. ಹೃತಿಕ್ ಅವರ ಸಂಬಂಧಿಕರು ಜರ್ಮನಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಮೃತದೇಹವನ್ನು ಭಾರತಕ್ಕೆ ತರುವ ನಿಟ್ಟಿನಲ್ಲಿ ಅವರ ಕುಟುಂಬದವರು ಚರ್ಚೆ ನಡೆಸಿದ್ದಾರೆ ಎಂದೆನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.