ADVERTISEMENT

ಭೂತಾನ್‌: ಸಂತಸವೇ ಸಂದೇಶ

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಪಿಟಿಐ
Published 18 ಆಗಸ್ಟ್ 2019, 20:00 IST
Last Updated 18 ಆಗಸ್ಟ್ 2019, 20:00 IST
ರಾಯಲ್‌ ಯೂನಿವರ್ಸಿಟಿ ಆಫ್‌ ಭೂತಾನ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ ಪ್ರಧಾನಿ ಮೋದಿ ಅವರನ್ನು ವಿದ್ಯಾರ್ಥಿಗಳು ಸ್ವಾಗತಿಸಿದರು     – ಪಿಟಿಐ ಚಿತ್ರ
ರಾಯಲ್‌ ಯೂನಿವರ್ಸಿಟಿ ಆಫ್‌ ಭೂತಾನ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ ಪ್ರಧಾನಿ ಮೋದಿ ಅವರನ್ನು ವಿದ್ಯಾರ್ಥಿಗಳು ಸ್ವಾಗತಿಸಿದರು     – ಪಿಟಿಐ ಚಿತ್ರ   

ಥಿಂಪು : ಸಂತಸದಿಂದ ಇರಬೇಕು ಎಂಬುದೇ ಭೂತಾನ್‌ ಜನರ ಮೂಲಸತ್ವ. ಹೀಗಾಗಿ ಜಗತ್ತಿನ ದೃಷ್ಟಿಯಲ್ಲಿ ಭೂತಾನ್‌ ಎಂಬುದು ‘ಒಟ್ಟು ರಾಷ್ಟ್ರೀಯ ಸಂತಸ’ ಎಂಬ ಪರಿಕಲ್ಪನೆಯ ಸಮಾನಾರ್ಥಕ ಪದವೆನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಹೇಳಿದರು.

ರಾಯಲ್‌ ಯೂನಿವರ್ಸಿಟಿ ಆಫ್‌ ಭೂತಾನ್‌ನಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

‘ಜಗತ್ತಿನ ಯಾವುದೇ ದೇಶಕ್ಕೆ ಹೋಗಿ, ಭೂತಾನ್‌ ಎಂದ ತಕ್ಷಣ ನಿಮ್ಮ ಮನದಲ್ಲಿ ಎಂಥ ಭಾವನೆ ಮೂಡುತ್ತದೆ ಎಂದು ಕೇಳಿದರೆ, ಒಟ್ಟು ರಾಷ್ಟ್ರೀಯ ಸಂತಸ ಎಂಬ ಉತ್ತರ ಸಿಗುತ್ತದೆ. ಇದರಲ್ಲಿ ಅಚ್ಚರಿ ಪಡುವಂಥದ್ದು ಏನೂ ಇಲ್ಲ. ಏಕೆಂದರೆ ಸಂತಸದ ತಿರುಳು ಏನು ಎಂಬುದನ್ನು ಭೂತಾನ್‌ ಚೆನ್ನಾಗಿ ಅರ್ಥ ಮಾಡಿಕೊಂಡಿದೆ’ ಎಂದು ಹೇಳಿದರು.

ADVERTISEMENT

‘ಜಗತ್ತು ಭೂತಾನ್‌ನಿಂದ ಕಲಿಯುವುದು ಸಾಕಷ್ಟಿದೆ. ಇಲ್ಲಿ ಅಭಿವೃದ್ಧಿ, ಪರಿಸರ ಹಾಗೂ ಸಂಸ್ಕೃತಿ ನಡುವೆ ಸಂಘರ್ಷ ಇಲ್ಲ. ಅವುಗಳು ಒಂದಕ್ಕೊಂದು ಪೂರಕವಾಗಿವೆ. ಇಲ್ಲಿ ಸಮಷ್ಟಿ ಪ್ರಜ್ಞೆ ಮೇಳೈಸಿದೆ’ ಎಂದು ಹೇಳಿದರು.

ಎರಡು ದಿನಗಳ ಭೇಟಿಗಾಗಿ ಶನಿವಾರ ಇಲ್ಲಿಗೆ ಬಂದಿದ್ದ ಮೋದಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ವಿಪಕ್ಷ ನಾಯಕರ ಭೇಟಿ: ಭೂತಾನ್‌ನ ವಿರೋಧ ಪಕ್ಷದ ನಾಯಕ ಡಾ.ಪೆಮಾ ಗ್ಯಾಮಶೋ ಅವರನ್ನು ಭೇಟಿ ಮಾಡಿದ ಮೋದಿ, ಹಲವಾರು ದ್ವಿ‍ಪಕ್ಷೀಯ ವಿಷಯಗಳ ಕುರಿತು ಚರ್ಚಿಸಿದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.