ವಾಷಿಂಗ್ಟನ್: ಅಮೆರಿಕ, ಭಾರತದೊಂದಿಗೆ ಹೊಂದಿರುವ ರಕ್ಷಣಾ ಕ್ಷೇತ್ರದ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸಲು ಜೋ ಬೈಡನ್ ಆಡಳಿತ ಯೋಜನೆ ರೂಪಿಸುತ್ತಿದೆ ಎಂದು ರಕ್ಷಣಾ ಕಾರ್ಯದರ್ಶಿಯಾಗಿ ನೇಮಕವಾಗಿರುವ ನಿವೃತ್ತ ಜನರಲ್ ಲೊಯ್ಡ್ ಆಸ್ಟಿನ್ ತಿಳಿಸಿದ್ದಾರೆ.
ಈ ಪಾಲುದಾರಿಕೆ ವಿಸ್ತರಣೆಯಿಂದ ಅಮೆರಿಕ ಮತ್ತು ಭಾರತದ ನಡವಿನ ರಕ್ಷಣಾ ಕ್ಷೇತ್ರದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಆಸ್ಟಿನ್ ಅವರು ಸೆನೆಟ್‌ನ ಸಶಸ್ತ್ರ ಸೇವೆಗಳ ಸಮಿತಿಯ ಸದಸ್ಯರಿಗೆ ತಿಳಿಸಿದ್ದಾರೆ.
ಅಮೆರಿಕದ ಪ್ರಮುಖ ರಕ್ಷಣಾ ಪಾಲುದಾರ ಭಾರತ. ಉಭಯ ರಾಷ್ಟ್ರಗಳ ನಡುವಿನ ಈ ಬಾಂಧವ್ಯ ವೃದ್ಧಿಗೆ ಒತ್ತು ನೀಡುವುದಾಗಿ ಆಸ್ಟಿನ್ ತಿಳಿಸಿದ್ದಾರೆ. ಜತೆಗೆ, ‘ಕ್ವಾಡ್‘ ರಾಷ್ಟ್ರಗಳೊಂದಿಗಿನ ರಕ್ಷಣಾ ಸಂವಾದದ ಮೂಲಕ ಭಾರತ ಮತ್ತು ಅಮೆರಿಕದ ನಡುವಿನ ರಕ್ಷಣಾ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ಮತ್ತು ವಿಸ್ತರಿಸಲು ಪ್ರಯತ್ನಿಸುವುದಾಗಿ ಎಂದು ಅವರು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.