ADVERTISEMENT

ಅಮೆರಿಕದ ಎನ್‌ಐಎಸಿಗೆ ಭಾರತೀಯ ಮೂಲದ ಇಬ್ಬರ ನೇಮಕ: ಜೋ ಬೈಡನ್

ಪಿಟಿಐ
Published 1 ಸೆಪ್ಟೆಂಬರ್ 2022, 11:07 IST
Last Updated 1 ಸೆಪ್ಟೆಂಬರ್ 2022, 11:07 IST
ಜೋ ಬೈಡನ್
ಜೋ ಬೈಡನ್   

ವಾಷಿಂಗ್ಟನ್‌: ಭಾರತೀಯ ಮೂಲದ ಮನು ಅಸ್ಥಾನಾ ಮತ್ತು ಮಧು ಬೇರಿವಾಲ್ ಅವರನ್ನು ರಾಷ್ಟ್ರೀಯ ಮೂಲಸೌಕರ್ಯ ಸಲಹಾ ಮಂಡಳಿಗೆ ನೇಮಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಅಧ್ಯಕ್ಷರ ರಾಷ್ಟ್ರೀಯ ಮೂಲಸೌಕರ್ಯ ಸಲಹಾ ಮಂಡಳಿಯು (ಎನ್ಐಎಸಿ) ಭೌತಿಕ ಮತ್ತು ಸೈಬರ್ ಅಪಾಯಗಳನ್ನು ಕಡಿಮೆ ಮಾಡುವುದು ಮತ್ತು ರಾಷ್ಟ್ರದ ನಿರ್ಣಾಯಕ ಮೂಲಸೌಕರ್ಯ ವಲಯಗಳ ಸುರಕ್ಷತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಶ್ವೇತಭವನಕ್ಕೆ ಸಲಹೆ ನೀಡುತ್ತದೆ.

ಎನ್‌ಐಎಸಿಗೆ ಬುಧವಾರ ಘೋಷಿಸಿದ 26 ಮಂದಿಯಲ್ಲಿ ಹಲವರು ಬ್ಯಾಂಕಿಂಗ್ ಮತ್ತು ಹಣಕಾಸು, ಸಾರಿಗೆ, ಇಂಧನ, ಅಣೆಕಟ್ಟುಗಳು, ರಕ್ಷಣಾ, ಸಂವಹನ, ಮಾಹಿತಿ ತಂತ್ರಜ್ಞಾನ, ಆರೋಗ್ಯ ಸೇವೆ, ಆಹಾರ ಮತ್ತು ಕೃಷಿ, ಸರ್ಕಾರಿ ಸೌಲಭ್ಯ, ತುರ್ತು ಸೇವೆ ಮತ್ತು ಉನ್ನತ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಳವಾದ ಅನುಭವ ಹೊಂದಿರುವ ಹಿರಿಯ ಅಧಿಕಾರಿಗಳಾಗಿದ್ದಾರೆ.

ADVERTISEMENT

ಅಸ್ಥಾನಾ ಅವರು ಉತ್ತರ ಅಮೆರಿಕದಲ್ಲಿ ಅತಿದೊಡ್ಡ ವಿದ್ಯುತ್ ಗ್ರಿಡ್ ಮೇಲ್ವಿಚಾರಣೆ ಹೊಣೆ ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.