ADVERTISEMENT

ಇಡಾ ಚಂಡಮಾರುತ: ನ್ಯೂಯಾರ್ಕ್‌ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 6:18 IST
Last Updated 3 ಸೆಪ್ಟೆಂಬರ್ 2021, 6:18 IST
ಇಡಾ ಚಂಡಮಾರುತದ ಪರಿಣಾಮದಿಂದ ನ್ಯೂಜೆರ್ಸಿಯ ಮ್ಯಾನ್‌ವಿಲ್ಲೆ ಪ್ರದೇಶ ಜಲಾವೃತಗೊಂಡಿರುವುದು (ರಾಯಿಟರ್ಸ್‌ ಚಿತ್ರ)
ಇಡಾ ಚಂಡಮಾರುತದ ಪರಿಣಾಮದಿಂದ ನ್ಯೂಜೆರ್ಸಿಯ ಮ್ಯಾನ್‌ವಿಲ್ಲೆ ಪ್ರದೇಶ ಜಲಾವೃತಗೊಂಡಿರುವುದು (ರಾಯಿಟರ್ಸ್‌ ಚಿತ್ರ)   

ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ ರಾಜ್ಯವು ಇಡಾ ಚಂಡಮಾರುತ ತಂದೊಡ್ಡಿರುವ ಮಹಾಮಳೆಗೆ ಅಕ್ಷರಶಃ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ನ್ಯೂಯಾರ್ಕ್‌ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂದು ಶ್ವೇತ ಭವನ ಗುರುವಾರ ಹೇಳಿಕೆ ಬಿಡುಗಡೆ ಮಾಡಿದೆ.

‘ಪ್ರವಾಹದಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ನೆರವು ಒದಗಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ’ ಎಂದು ಶ್ವೇತ ಭವನ ಹೇಳಿದೆ.

ಇಡಾ ಚಂಡಮಾರುತದ ಪರಿಣಾಮ ನ್ಯೂಯಾರ್ಕ್‌ ಸೇರಿದಂತೆ ಈಶಾನ್ಯ ಭಾಗದ ನಾಲ್ಕು ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಪ್ರವಾಹದಲ್ಲಿ ಕನಿಷ್ಠ 44 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.