ADVERTISEMENT

ಅಮೆರಿಕ ಅಟಾರ್ನಿ ಜನರಲ್‌ ಹುದ್ದೆಗೆ ಗಾರ್ಲಂಡ್‌

ಏಜೆನ್ಸೀಸ್
Published 7 ಜನವರಿ 2021, 14:13 IST
Last Updated 7 ಜನವರಿ 2021, 14:13 IST
ಮೆರಿಕ್‌ ಗಾರ್ಲಂಡ್‌
ಮೆರಿಕ್‌ ಗಾರ್ಲಂಡ್‌   

ವಾಷಿಂಗ್ಟನ್‌: ಮೆರಿಕ್‌ ಗಾರ್ಲಂಡ್‌ ಅವರನ್ನು ಅಟಾರ್ನಿ ಜನರಲ್‌ ಹುದ್ದೆಗೆ ನೇಮಕ ಮಾಡುವುದಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಗುರುವಾರ ಹೇಳಿದ್ದಾರೆ.

ವಾಷಿಂಗ್ಟನ್‌ ಫೆಡರಲ್‌ ಅಪೀಲ್ಸ್‌ ನ್ಯಾಯಾಲಯದ ನ್ಯಾಯಾಧೀಶರಾಗಿರುವ 68 ವರ್ಷ ವಯಸ್ಸಿನ ಗಾರ್ಲಂಡ್‌, 1993ರಲ್ಲಿ ಸಹಾಯಕ ಅಟಾರ್ನಿ ಜನರಲ್‌ ಆಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಮುಖ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು.

1997ರಲ್ಲಿ ಅಧ್ಯಕ್ಷರಾಗಿದ್ದ ಬಿಲ್‌ ಕ್ಲಿಂಟನ್‌ ಅವರು ಗಾರ್ಲಂಡ್‌ ಅವರನ್ನು ಆಗ ವಾಷಿಂಗ್ಟನ್‌ ಅಪೀಲ್ಸ್‌ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಿಸಿದ್ದರು. ಬಳಿಕ ಅದೇ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿಯೂ (2013ರಲ್ಲಿ) ಸೇವೆ ಸಲ್ಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.