ADVERTISEMENT

₹26 ಕೋಟಿ ನಿಧಿ ಸಂಗ್ರಹಿಸಿದ ಕಮಲಾ ಹ್ಯಾರಿಸ್

ಪಿಟಿಐ
Published 10 ಜೂನ್ 2020, 6:56 IST
Last Updated 10 ಜೂನ್ 2020, 6:56 IST
ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್
ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್   

ವಾಷಿಂಗ್ಟನ್: ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಜೊ ಬಿಡೆನ್ ಅವರ ಪರವಾಗಿ ನಿಧಿ ಸಂಗ್ರಹದಲ್ಲಿ ಭಾರತೀಯ ಸಂಜಾತಸೆನೆಟರ್ ಕಮಲಾ ಹ್ಯಾರಿಸ್ ಅವರು ತೊಡಗಿಸಿಕೊಂಡಿದ್ದು, ₹26 ಕೋಟಿ (35 ಲಕ್ಷ ಯುಎಸ್‌ಡಿ) ಒಟ್ಟುಗೂಡಿಸಿದ್ದಾರೆ.

ಬಿಡೆನ್ ಅವರ ಚುನಾವಣಾ ಪ್ರಚಾರದ ವೇಳೆ ಮಂಗಳವಾರ ಒಂದೇ ದಿನ ಇಷ್ಟು ದೊಡ್ಡ ಮೊತ್ತ ಜಮಾವಣೆಯಾಗಿದೆ. ಕಳೆದ ತಿಂಗಳು ಒಂದೇ ದಿನ 40 ಲಕ್ಷ ಡಾಲರ್ ಸಂಗ್ರಹವಾಗಿತ್ತು.

ನಿಧಿ ಸಂಗ್ರಹಣೆ ಸಮಯದಲ್ಲಿ ಹ್ಯಾರಿಸ್ ಅವರ ಉಪಸ್ಥಿತಿಯು ಮಹತ್ವ ಪಡೆದುಕೊಳ್ಳುತ್ತಿದೆ. ಕಮಲಾ ಅವರನ್ನು ಉಪಾಧ್ಯಕ್ಷ ಹುದ್ದೆಗೆ ಪರಿಗಣಿಸುವ ಎಲ್ಲ ಸಾಧ್ಯತೆಗಳಿವೆ.

ADVERTISEMENT

ಬಿಡೆನ್ ಅವರು 1,400 ಬೆಂಬಲಿಗರನ್ನು ಉದ್ದೇಶಿಸಿ ಡಿಜಿಟಲ್ ವೇದಿಕೆಯಲ್ಲಿ ಮಾತನಾಡಿದರು.

ಕಳೆದ ವರ್ಷ ಬಿಡೆನ್ ಅವರ ಪ್ರಮುಖ ಟೀಕಾಕಾರರಲ್ಲಿ ಕಮಲಾ ಒಬ್ಬರಾಗಿದ್ದರು. ಕೆಲವು ತಿಂಗಳ ಹಿಂದೆ ಶ್ವೇತಭವನದ ಸ್ಪರ್ಧೆಯಿಂದ ಹಿಂದೆ ಸರಿದ ಅವರು, ಬಿಡೆನ್ ಪರವಾಗಿ ನಿಂತಿದ್ದಾರೆ. ನಿಧಿ ಸಂಗ್ರಹ ಸಮಾವೇಶದಲ್ಲಿ ಬಿಡೆನ್ ಅವರನ್ನು ಕಮಲಾ ಹೊಗಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.