ADVERTISEMENT

ಶ್ವೇತಭವನದ ಸಹಾಯಕ ಮಾಧ್ಯಮ ಕಾರ್ಯದರ್ಶಿಯಾಗಿ ವೇದಾಂತ್ ಪಟೇಲ್‌ ನಾಮನಿರ್ದೇಶನ

ಪಿಟಿಐ
Published 19 ಡಿಸೆಂಬರ್ 2020, 6:07 IST
Last Updated 19 ಡಿಸೆಂಬರ್ 2020, 6:07 IST
ವೇದಾಂತ್‌ ಪಟೇಲ್‌
ವೇದಾಂತ್‌ ಪಟೇಲ್‌   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡನ್‌ ಅವರು ಭಾರತ ಮೂಲದ ಅಮೆರಿಕನ್‌ ವೇದಾಂತ್‌ ಪಟೇಲ್ ಅವರನ್ನು ಶ್ವೇತಭವನದ ಸಂವಹನ ವಿಭಾಗದ ಸಹಾಯಕ ಮಾಧ್ಯಮ ಕಾರ್ಯದರ್ಶಿಯನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ.

ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಪಟೇಲ್‌ ಅವರು ಬೈಡನ್‌ ಪರ ಪ್ರಚಾರ ಕಾರ್ಯದ ಪ್ರಾದೇಶಿಕ ಸಂವಹನ ನಿರ್ದೇಶಕರಾಗಿದ್ದರು. ಪ್ರಸ್ತುತ ಅವರು ಬೈಡನ್‌ ಅವರ ವಕ್ತಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT