ವಾಷಿಂಗ್ಟನ್: ಅಮೆರಿಕದ ನಿಯೋಜಿತ ಜೋ ಬೈಡನ್ ಅವರು ಭಾರತೀಯ ಅಮೆರಿಕನ್, ಆರೋಗ್ಯ ನೀತಿ ತಜ್ಞ ವಿದುರ್ ಶರ್ಮಾ ಅವರನ್ನು ‘ಕೋವಿಡ್–19 ರೆಸ್ಪಾನ್ಸ್ ಟೀಂ’ನ ಸಲಹೆಗಾರನನ್ನಾಗಿ ನೇಮಿಸಿದ್ದಾರೆ.
ದೇಶದಲ್ಲಿ ಆರಂಭಿಸಲಾಗುವ ಬೃಹತ್ ಲಸಿಕೆ ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ ‘ಕೋವಿಡ್–19 ರೆಸ್ಪಾನ್ಸ್ ಟೀಂ’ ಅನ್ನು ರಚಿಸಲಾಗಿದೆ.
ಬರಾಕ್ ಒಬಾಮಾ ಅವರು ಅಧ್ಯಕ್ಷರಾಗಿದ್ದಾಗ ಶರ್ಮಾ ಅವರು, ದೇಶೀಯ ನೀತಿ ಮಂಡಳಿಯಲ್ಲಿ ಆರೋಗ್ಯ ನೀತಿಗೆ ಸಂಬಂಧಿಸಿ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಅಲ್ಲದೆ ಅವರು ‘ಪ್ರೊಟೆಕ್ಟ್ ಅವರ್ ಕೇರ್’ನಲ್ಲಿ ಉಪ ಸಂಶೋಧನಾ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.