ADVERTISEMENT

ತೈವಾನ್‌ ಮೇಲಿನ ಚೀನಾದ ದಬ್ಬಾಳಿಕೆ: ಜೋ ಬೈಡನ್‌ ಕಳವಳ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 15:51 IST
Last Updated 14 ನವೆಂಬರ್ 2022, 15:51 IST
ಶ್ವೇತಭವನದಲ್ಲಿ ಷಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗಿರುವ ಜೋ ಬೈಡನ್‌ 
ಶ್ವೇತಭವನದಲ್ಲಿ ಷಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗಿರುವ ಜೋ ಬೈಡನ್‌    

ನುಸಾ ಡುವಾ (ಇಂಡೊನೇಷ್ಯಾ): ತೈವಾನ್‌ ಮೇಲೆ ಚೀನಾದ ದಬ್ಬಾಳಿಕೆ ಮತ್ತು ಆಕ್ರಮಣಕಾರಿ ನಿಲುವು ಹೆಚ್ಚಾಗುತ್ತಿದೆ ಎಂದು ಷಿನ್‌ಜಿಯಾಂಗ್‌, ಟಿಬೆಟ್‌, ಹಾಂಗ್‌ಕಾಂಗ್‌ನಲ್ಲಿಬೀಜಿಂಗ್‌ ಆಯೋಜಿಸಿದ್ದ ಮಾನವ ಹಕ್ಕುಗಳ ಕಾರ್ಯಕ್ರಮದಲ್ಲಿ ಅಮೆರಿಕಾದ ಅಧ್ಯಕ್ಷ ಜೋ ಬೈಡನ್‌ಕಳವಳ ವ್ಯಕ್ತಪಡಿಸಿದ್ದಾರೆ.

ಜೋ ಬೈಡನ್‌ ಅವರುಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಷಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗುತ್ತಿದ್ದಾರೆಂದು ಶ್ವೇತಭವನದ ಮೂಲಗಳು ತಿಳಿಸಿವೆ.

ಸುಮಾರು ಮೂರು ಗಂಟೆ ನಡೆದ ಸಭೆಯಲ್ಲಿಪರಮಾಣುಬಾಂಬ್‌ ದಾಳಿಯು ಎಂದಿಗೂ ಎರಡು ದೇಶಗಳ ನಡುವೆ ನಡೆಯಬಾರದು. ಈದಾಳಿಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲವೆಂದು ಬೈಡನ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.