ADVERTISEMENT

ಅಮೆರಿಕ: ಜೋ ಬೈಡನ್– ಅಶ್ರರಫ್‌ ಘನಿ ಭೇಟಿ; ಉಗ್ರ ನಿಗ್ರಹದ ಚರ್ಚೆ

ಅಮೆರಿಕದ ಶ್ವೇತ ಭವನದಲ್ಲಿ ಉಭಯ ನಾಯಕರ ಸಭೆ

ಪಿಟಿಐ
Published 22 ಜೂನ್ 2021, 7:05 IST
Last Updated 22 ಜೂನ್ 2021, 7:05 IST
ಜೋ ಬೈಡನ್
ಜೋ ಬೈಡನ್   

ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಿನ ಉಗ್ರರ ಚಟುವಟಿಕೆಗಳನ್ನು ನಿಗ್ರಹಿಸುವ ಕುರಿತು ಚರ್ಚಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಶುಕ್ರವಾರ ಅಫ್ಗಾನಿಸ್ಥಾನದ ಅಧ್ಯಕ್ಷ ಅಶ್ರರಫ್‌ ಘನಿ ಅವರನ್ನು ಶ್ವೇತಭವನದಲ್ಲಿ ಭೇಟಿಯಾಗಲಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಎರಡೂ ದೇಶಗಳ ಅಧ್ಯಕ್ಷರ ನಡುವಿನ ಮುಖಾಮುಖಿ ಭೇಟಿಯಲ್ಲಿ, ಅಫ್ಗಾನಿಸ್ತಾನದಲ್ಲಿ ನಿಯೋಜಿಸಿದ್ದ ಅಮೆರಿಕ ಮತ್ತು ನ್ಯಾಟೊ ಪಡೆಗಳ ಬಾಕಿ ಸೈನಿಕರನ್ನು ಸೆಪ್ಟೆಂಬರ್ 11ರೊಳಗೆ ಹಿಂದಕ್ಕೆ ಕರೆಸಿಕೊಳ್ಳುವ ಕುರಿತು ಚರ್ಚೆ ನಡೆಯಲಿದೆ.

‘ಅಧ್ಯಕ್ಷ ಜೋ ಬೈಡನ್ ಅವರು, ಘನಿ ಅವರನ್ನು ಶುಕ್ರವಾರದ ಸಭೆಗೆ ಆಹ್ವಾನಿಸಲು ಉತ್ಸುಕರಾಗಿದ್ದಾರೆ. ಈ ಭೇಟಿಯಲ್ಲಿ ಅಫ್ಗಾನಿಸ್ತಾನವನ್ನು ಮತ್ತೆ ಉಗ್ರರ ತಾಣವಾಗದಂತೆ ಮಾಡಲು ಎರಡು ರಾಷ್ಟ್ರಗಳು ಯಾವ ರೀತಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ‌ಹೇಗೆ ಉಗ್ರರನ್ನು ನಿಗ್ರಹಿಸಬೇಕು ಎಂಬುದರ ಕುರಿತು ಚರ್ಚಿಸುವ ಸಾಧ್ಯತೆ ಇದೆ‘ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಪ್ಸಕಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.