ADVERTISEMENT

ಅಫ್ಗಾನಿಸ್ತಾನ ರಾಜಧಾನಿ ಕಾಬೂಲ್‌ನ ಗುರುದ್ವಾರದಲ್ಲಿ ಸ್ಫೋಟ, ಗುಂಡಿನ ದಾಳಿ

ಏಜೆನ್ಸೀಸ್
Published 18 ಜೂನ್ 2022, 6:30 IST
Last Updated 18 ಜೂನ್ 2022, 6:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾಬೂಲ್: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವಗುರುದ್ವಾರಕ್ಕೆ ಶನಿವಾರ ಬೆಳಗ್ಗೆನುಗ್ಗಿರುವ ಬಂದೂಕುಧಾರಿಗಳು, ಗ್ರೆನೇಡ್‌ ಸ್ಫೋಟಿಸಿದ್ದಾರೆ. ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಆಂತರಿಕ ಸಚಿವಾಲಯ ತಿಳಿಸಿದೆ.

'ಗುರುದ್ವಾರದಿಂದ ಸ್ಫೋಟ ಮತ್ತುಗುಂಡಿನ ಶಬ್ದ ಕೇಳಿತು' ಎಂದು ಧಾರ್ಮಿಕ ಮುಖಂಡಗೊರ್ನಾಮ್‌ ಸಿಂಗ್‌ ಹೇಳಿದ್ದಾರೆ.

'ಗ್ರೆನೆಡ್‌ ಸ್ಫೋಟದಿಂದಾಗಿಸಿಖ್‌ ಸಮುದಾಯದ ಇಬ್ಬರು ಗಾಯಗೊಂಡಿದ್ದಾರೆ' ಎಂದುಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್‌ ನಫಿ ತಕೊರ್‌ತಿಳಿಸಿದ್ದಾರೆ.

ADVERTISEMENT

ಕೆಲ ಸಮಯದ ಬಳಿಕ ಅದೇ ಪ್ರದೇಶದಲ್ಲಿ ಕಾರ್‌ ಬಾಂಬ್‌ ಸ್ಫೋಟಗೊಂಡಿದ್ದು, ಯಾವುದೇ ಸಾವು–ನೋವು ಸಂಭವಿಸಿಲ್ಲ ಎಂದೂಅವರು ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.