ADVERTISEMENT

ದೋಣಿ ಮುಳುಗಿ 60 ವಲಸಿಗರ ದುರ್ಮರಣ

​ಪ್ರಜಾವಾಣಿ ವಾರ್ತೆ
Published 11 ಮೇ 2019, 19:47 IST
Last Updated 11 ಮೇ 2019, 19:47 IST
ಜ್ಯಾರಿಸ್‌ನ ಆಶ್ರಯ ಕೇಂದ್ರದಲ್ಲಿ ದುರಂತದಲ್ಲಿ ಬದುಕುಳಿದ ಪ್ರಯಾಣಿಕರು  
ಜ್ಯಾರಿಸ್‌ನ ಆಶ್ರಯ ಕೇಂದ್ರದಲ್ಲಿ ದುರಂತದಲ್ಲಿ ಬದುಕುಳಿದ ಪ್ರಯಾಣಿಕರು     

ಟ್ಯೂನಿಸ್‌: ಲಿಬಿಯಾದಿಂದ ಇಟಲಿಗೆ ತೆರಳುತ್ತಿದ್ದ ಪ್ರಯಾಣಿಕರ ದೋಣಿ ಮೆಡಿಟರೇನಿಯನ್‌ ಸಮುದ್ರದಲ್ಲಿ ಮುಳುಗಿ 60 ವಲಸಿಗರು ದುರ್ಮರಣ ಹೊಂದಿದ್ದಾರೆ. ಟ್ಯುನಿಷಿಯಾ ಬಳಿ ನಡೆದ ಈ ದುರಂತದಲ್ಲಿ ಮೃತಪಟ್ಟವರು ಹೆಚ್ಚಿನವರು ಬಾಂಗ್ಲಾದೇಶ ಮೂಲದವರು ಎಂದು ರೆಡ್ ಕ್ರೆಸೆಂಟ್ ಸಂಸ್ಥೆ ತಿಳಿಸಿದೆ.

ಗುರುವಾರ ತಡರಾತ್ರಿ ಝುವಾರ ಕರಾವಳಿಯಿಂದ ಹೊರಟಿದ್ದ ದೋಣಿಯಲ್ಲಿದ್ದ ಪ್ರಯಾಣಿಕರ ಪೈಕಿ 75 ಜನರನ್ನು ದೊಡ್ಡ ಹಡಗಿನಿಂದಸಣ್ಣ ದೋಣಿಗೆ ವರ್ಗಾಯಿಸಲಾಗಿತ್ತು. ಇದರಲ್ಲಿ 51 ಬಾಂಗ್ಲಾದೇಶಿಗರು, ಈಜಿಪ್ಟ್‌ನ ಮೂವರು, ಆಫ್ರಿಕಾ ಸೇರಿದಂತೆ ಇತರೆ ದೇಶದವರಿದ್ದರು. ಸಣ್ಣ ಹಡಗಿನಲ್ಲಿ ಭಾರಿ ಸಂಖ್ಯೆಯ ಪ್ರಯಾಣಿಕರಿದ್ದ ಕಾರಣ ಕೇವಲ 10 ನಿಮಿಷದಲ್ಲಿ ದೋಣಿ ಮುಳುಗಿತು ಎಂದು ದುರಂತದಲ್ಲಿ ಬದುಕುಳಿದವರೊಬ್ಬರು ತಿಳಿಸಿದರು.

ಟ್ಯುನೀಷಿಯಾದ ಮೀನುಗಾರರು 16 ಜನರನ್ನು ರಕ್ಷಿಸಿದ್ದಾರೆ. ಬದುಕುಳಿದವರುಅಂದಾಜು ಎಂಟು ಗಂಟೆ ಸಮುದ್ರದಲ್ಲೇ ಮೈಕೊರೆಯುವ ಚಳಿ ನಡುವೆ ಜೀವನ್ಮರಣ ಹೋರಾಟ ನಡೆಸಿದ್ದಾರೆ. ದುರಂತದ ಕುರಿತು ಮೀನುಗಾರರು ಟ್ಯುನಿಷಿಯಾದ ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.