ಆಸ್ಟಿನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಚುನಾವಣಾ ಪ್ರಚಾರ ರ್‍ಯಾಲಿ ಸಂದರ್ಭ ಟೆಕ್ಸಾಸ್‌ನ ಟ್ರಾವಿಸ್ ಸರೋವರದಲ್ಲಿ ಹಲವು ಬೋಟ್‌ಗಳು ಮುಳುಗಿರುವ ಬಗ್ಗೆ ವರದಿಯಾಗಿದೆ.
ಬೋಟ್‌ಗಳು ಮುಳುಗಿರುವ ಬಗ್ಗೆ ಸ್ಥಳೀಯಾಡಳಿತಕ್ಕೆ ಅನೇಕ ತುರ್ತು ಕರೆಗಳು ಬಂದಿವೆ. ಬೋಟ್‌ಗಳು ಮುಳುಗಿರುವುದನ್ನು ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಖಚಿತಪಡಿಸಿದ್ದಾರೆ ಎಂದು ಸಿಎನ್‌ಎನ್ ಸುದ್ದಿವಾಹಿನಿ ವರದಿ ಮಾಡಿದೆ.
ಈ ಪ್ರಚಾರ ರ್‍ಯಾಲಿಯಲ್ಲಿ 2,600ಕ್ಕೂ ಹೆಚ್ಚು ಜನರನ್ನು ಸೇರಿಸಲು ಉದ್ದೇಶಿಸಲಾಗಿತ್ತು. ಘಟನೆ ವೇಳೆ ಎಷ್ಟು ಮಂದಿ ಇದ್ದರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈವರೆಗೆ ಸಾವು–ನೋವು ವರದಿಯಾಗಿಲ್ಲ ಎಂದು ವರದಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.