ಕಠ್ಮಂಡು: ಇಸ್ರೇಲ್ ಮೇಲೆ ಹಮಾಸ್ ದಾಳಿಯ ವೇಳೆ ಹಲವರ ಜೀವ ಉಳಿಸಿದ್ದ ನೇಪಾಳದ ವ್ಯಕ್ತಿಯೊಬ್ಬರ ಮೃತದೇಹವು ಇಸ್ರೇಲ್‌ನಲ್ಲಿ ಪತ್ತೆಯಾಗಿದ್ದು, ಶೀಘ್ರದಲ್ಲಿ ಸ್ವದೇಶಕ್ಕೆ ಕಳುಹಿಸಲಾಗುವುದು ಎಂದು ಇಸ್ರೇಲ್‌ನ ರಕ್ಷಣಾ ಪಡೆ ತಿಳಿಸಿದೆ.
ಇಸ್ರೇಲ್‌ನಲ್ಲಿ ಶಿಕ್ಷಣದ ಜೊತೆ ಉದ್ಯೋಗದಲ್ಲಿದ್ದ ಬಿಪಿನ್ ಜೋಶಿ(23) ಅವರನ್ನು ಅಕ್ಟೋಬರ್ 7ರ ದಾಳಿಯ ವೇಳೆ ಹಮಾಸ್ ಬಂಡುಕೋರರು ಅಪಹರಿಸಿದ್ದರು. ಒತ್ತೆಯಾಳಾಗಿ ಇದ್ದಾಗಲೇ ಅವರು ಮೃತಪಟ್ಟಿದ್ದರು.
‘ದಾಳಿಯ ವೇಳೆ ತಮ್ಮ ಕೋಣೆಯೊಳಗೆ ಬಿದ್ದ ಎರಡು ಗ್ರೆನೇಡ್‌ಗಳನ್ನು ಜೋಶಿಯವರು ಮತ್ತೆ ದಾಳಿಕೋರರ ಕಡೆಗೆ ಎಸೆದಿದ್ದರು. ಇದರಿಂದಾಗಿ 17 ಮಂದಿಯ ಜೀವ ಉಳಿದಿದೆ’ ಎಂದು ಜೋಶಿ ಸ್ನೇಹಿತ ಬಿಭುಶಾ ಅಧಿಕಾರಿ ಅವರು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.