ADVERTISEMENT

ಕೊಲಂಬೊ ತಲುಪಿದ ಲಂಕಾ ಪ್ರಜೆಯ ಮೃತದೇಹ

ಪಿಟಿಐ
Published 6 ಡಿಸೆಂಬರ್ 2021, 11:03 IST
Last Updated 6 ಡಿಸೆಂಬರ್ 2021, 11:03 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಲಾಹೋರ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಶುಕ್ರವಾರ ಉದ್ರಿಕ್ತ ಜನರ ದಾಳಿಗೆ ಸಿಕ್ಕಿ ಮೃತಪಟ್ಟ ಶ್ರೀಲಂಕಾದ ಪ್ರಜೆಪ್ರಿಯಾಂತ ಕುಮಾರ್‌ ದಿಯಾವಾದಾನಾಗೆ ಅವರ ಮೃತದೇಹವನ್ನು ಸೋಮವಾರ ಕೊಲಂಬೊಗೆ ಕಳುಹಿಸಿಕೊಡಲಾಗಿದೆ.

ಮತ್ತೊಂದೆಡೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಇನ್ನೂ ಏಳು ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತರ ಒಟ್ಟು ಸಂಖ್ಯೆ 131ಕ್ಕೆ ಏರಿದಂತಾಗಿದೆ. ಇವರಲ್ಲಿ 26 ಮಂದಿ ಪ್ರಮುಖ ಆರೋಪಿಗಳು ಸೇರಿದ್ದಾರೆ ಎಂದು ಪಂಜಾಬ್ ಪ್ರಾಂತ್ಯದ ಪೊಲೀಸರು ತಿಳಿಸಿದ್ದಾರೆ.

ಧರ್ಮ ನಿಂದನೆ ಆರೋಪದ ಮೇರೆಗೆ ದಿಯಾವಾದಾನಾಗೆ ಅವರನ್ನು ಥಳಿಸಿ ಕೊಂದು, ಮೃತದೇಹಕ್ಕೆ ಬೆಂಕಿ ಹಚ್ಚಿದ್ದ ಉದ್ರಿಕ್ತ ಗುಂಪು, ಅವರು ಕೆಲಸ ಮಾಡುತ್ತಿದ್ದ ಕ್ರೀಡಾ ದಿರಿಸು ತಯಾರಿಸುವ ಉದ್ಯಮದ ಮಾಲೀಕರನ್ನೂ ಕೊಲ್ಲಲು ಮುಂದಾಗಿತ್ತು. ಕಾರ್ಖಾನೆಗೆ ಬೆಂಕಿ ಹಚ್ಚಲು ಸಹ ಯತ್ನಿಸಿತ್ತು. ಆದರೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಈ ಯತ್ನ ಫಲಿಸಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.