ADVERTISEMENT

ಬೋಯಿಂಗ್‌ನಿಂದ ಕೊನೆಯ 747 ವಿಮಾನ ಅಟ್ಲಾಸ್‌ ಏರ್‌ಗೆ ಹಸ್ತಾಂತರ

ರಾಯಿಟರ್ಸ್
Published 31 ಜನವರಿ 2023, 12:48 IST
Last Updated 31 ಜನವರಿ 2023, 12:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಯಾಟಲ್‌: ವಿಮಾನ ತಯಾರಿಕಾ ಕಂಪನಿ ಬೋಯಿಂಗ್‌ ತನ್ನ 747 ಸರಣಿಯ ಕೊನೆಯ ವಿಮಾನವನ್ನು ಮಂಗಳವಾರ ಅಟ್ಲಾಸ್‌ ಏರ್‌ಗೆ ಹಸ್ತಾಂತರಿಸಿದ್ದು, ಈ ಸರಣಿಯ ವಿಮಾನ ಉತ್ಪಾದನೆಗೆ ವಿದಾಯ ಹೇಳಿದೆ.

1969ರಲ್ಲಿ ಪ್ರಾರಂಭವಾದ ಜೆಟ್‌ ಸರಣಿಯ ಕೊನೆಯ ವಿಮಾನದ ಹಸ್ತಾಂತರಕ್ಕೆ ‌ಸಾವಿರಾರು ಬೋಯಿಂಗ್ ಉದ್ಯೋಗಿಗಳು ಸಾಕ್ಷಿಯಾಗಿದ್ದರು. ಬೋಯಿಂಗ್ ಇದುವರೆಗೆ 1,574ರಷ್ಟು 747 ವಿಮಾನಗಳನ್ನು ಸಿದ್ಧಪಡಿಸಿ ವಿವಿಧ ದೇಶಗಳ ವಿಮಾನಯಾನ ಸಂಸ್ಥೆಗಳಿಗೆ ಹಸ್ತಾಂತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT