ADVERTISEMENT

ಅಫ್ಗಾನಿಸ್ತಾನ: ಕಾಬೂಲ್‌ ಮಸೀದಿ ಗುರಿಯಾಗಿಸಿ ಬಾಂಬ್‌ ದಾಳಿ, ನಾಗರಿಕರ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2021, 13:16 IST
Last Updated 3 ಅಕ್ಟೋಬರ್ 2021, 13:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಬೂಲ್‌: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಭಾನುವಾರ ಮಸೀದಿಯೊಂದರ ಪ್ರವೇಶ ದ್ವಾರವನ್ನು ಗುರಿಯಾಗಿಸಿ ಬಾಂಬ್‌ ದಾಳಿ ನಡೆದಿದ್ದು, ಹಲವು ನಾಗರಿಕರು ಮೃತಪಟ್ಟಿದ್ದಾರೆ ಎಂದು ತಾಲಿಬಾನ್‌ ವಕ್ತಾರ ತಿಳಿಸಿದ್ದಾರೆ.

ಕಾಬುಲ್‌ನ ಈದ್ಗಾ ಮಸೀದಿಯನ್ನು ಗುರಿಯಾಗಿಸಿ ಬಾಂಬ್‌ ದಾಳಿ ನಡೆಸಲಾಗಿದೆ. ಸಾವು-ನೋವುಗಳ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಹಲವು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ದಾಳಿಯ ಹೊಣೆಯನ್ನು ಇದುವರೆಗೆ ಯಾರೂ ಹೊತ್ತುಕೊಂಡಿಲ್ಲ. ಅಫ್ಗಾನಿಸ್ತಾನದ ಮೇಲೆ ತಾಲಿಬಾನ್‌ ಹಿಡಿತ ಸಾಧಿಸಿದ ಬಳಿಕ ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆಯ ದಾಳಿಗಳು ಹೆಚ್ಚಿವೆ. ಉಭಯ ಉಗ್ರ ಸಂಘಟನೆಗಳ ನಡುವಿನ ಕಲಹ ದಾಳಿ ಹೆಚ್ಚಲು ಕಾರಣ ಎಂದು 'ಎಪಿ' ವರದಿ ಮಾಡಿದೆ.

ನಂಗರ್‌ಹಾರ್‌ನ ಪೂರ್ವ ಭಾಗದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಪ್ರಭಾವ ಹೊಂದಿದ್ದು, ತಾಲಿಬಾನ್‌ಅನ್ನು ಶತ್ರುವೆಂದು ಪರಿಗಣಿಸಿದೆ. ಜಲಾಲಾಬಾದ್‌ ಪ್ರದೇಶದಲ್ಲಿ ಹಲವಾರು ತಾಲಿಬಾನ್ ಉಗ್ರರನ್ನು ಕೊಂದುಹಾಕಿರುವುದಾಗಿ, ತಾಲಿಬಾನ್‌ ವಿರುದ್ಧ ಹಲವು ದಾಳಿಗಳನ್ನು ನಡೆಸಿರುವುದಾಗಿ ಇಸ್ಲಾಮಿಕ್‌ ಸ್ಟೇಟ್‌ ಹೇಳಿಕೊಂಡಿದೆ. ಆದರೆ ಕಾಬೂಲ್‌ ಮೇಲೆ ನಡೆಸಿರುವ ದಾಳಿ ವಿರಳ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.